भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಸಣ್ಣಿಗೆ

[ನಾ]ಒರಳು-ರುಬ್ಬುಗುಂಡು (ತಮ್ಮ ಮುಂ ನೆರಪದಾಯುಷ್ಯಂಬರಂ ಮಾಯಮಾಗದು ಮೆಯ್ ಸಣ್ಣಿಗೆಯೊಳ್ ಮಗುೞ್ಚಿದೊಡಂ:ಆದಿಪು, ೫. ೯೩)

ಸಣ್ಣಿಸು

[ಕ್ರಿ]ಪುಡಿಮಾಡು (ತರಂತರದೊಳೆ ಪಾಯ್ದ ಕೂರ್ಗಣೆಗಳಂ ತಱಿದೊಟ್ಟಿ ತೆರಳ್ಚಿ ತೂಳ್ದಿಕೊಂಡು ಎರೆದು ಮಗುೞ್ಚಿ ಸಣ್ಣಿಸಿದಂ ಆಂತ ಚತುರ್ವಲಮಂ ಗುಣಾರ್ಣವಂ:ಪಂಪಭಾ, ೧೧. ೧೪೭)

ಸಂತಂ

[ನಾ]ನೆಮ್ಮದಿ (ಲೋಕದೊಳಂ ನಿನ್ನಿರ್ಕೆಯ ಲೋಕಾಗ್ರಮೆ ಸಂತಂ ಅದನೆ ಮಾಡೆನಗರ್ಹಾ:ಆದಿಪು, ೧೦. ೫೭);[ನಾ]ಸೌಖ್ಯ (ದಿಗ್ವಿಜಯಮುಮಾದಂತೆಡರೆಯ್ದೆ ನಡೆದುದೆ ಸಂತಮೆ ದಕ್ಷಿಣಭುಜಕ್ಕೆ ಭೂವಲ್ಲಭನಾ:ಆದಿಪು. ೧೪. ೪೮);[ಅ]ಯಾವಾಗಲೂ (ಸುಯೋಧನನಾಳುತ್ತಿರೆ ಸಂದ ಹಸ್ತಿನಪುರಂ ಸಂತಂ ಬಸಂತಂ:ಪಂಪಭಾ,೩. ೩೨)

ಸಂತತಂ

[ಅ]ನಿರಂತರವಾಗಿ (ಉಜ್ಜ್ವಳಮಂಗಳೋಪಕರಣ ದ್ರವ್ಯಂಗಳಂ ನೀಡೆ ಸಂತತಂ ಏನಂದು ಜಿನಾರ್ಭಕಂಗೆಸೆದುದೋ ಜನ್ಮಾಭಿಷೇಕೋತ್ಸವಂ:ಆದಿಪು, ೭. ೮೧)

ಸತತಗತಿ

[ನಾ]ಸದಾ ಚಲಿಸುವುದು, ಗಾಳಿ (ಸಿಂಧುವನವೇದಿಕೆಯಿಂ ಸತತಗತಿವೇಗದಿಂದೂರ್ಜಿತ ಭುಜಬಳನೆಯ್ದಿ ನಗದ ವನವೇದಿಕೆಯಂ:ಆದಿಪು, ೧೩. ೩೫)

ಸಂತತಿ

[ನಾ] ಕುಲ, ವಂಶ (ಚಿಂತೆಯಿದೇನೊ ಸಂತತಿಗೆ ನೆಟ್ಟನೆ ಮಕ್ಕಳೆ ಬಾರ್ತೆಯಪ್ಪೊಡೆ ಇನ್ನಿಂತಿರವೇಡ: ಪಂಪಭಾ, ೧. ೧೧೮); ಸಮೂಹ (ಉಡಲುಂ ತುಡಲುಂ ವಸ್ತ್ರಂ ತುಡುಗೆಯಂ ಆನೆಯುಮಂ ಅರ್ಥಿಸಂತತಗೀಯಲ್ ಬಿಡುವೊನ್ನುಮಂ: ಪಂಪಭಾ, ೧೦. ೩೮)

ಸಂತತಿಚ್ಛೇದ

[ನಾ]ವಂಶನಾಶ(ಮಗಳಂ ಈವೆನಪ್ಪೊಡೆ ಕೊಡಗೂಸೆಂಬುದು ಪೆಱರೊಡವೆ ಮಗನಂ ಈವೆನಪ್ಪೊಡೆ ಸಂತತಿಚ್ಛೇದಮುಂ ಪಿಂಡಚ್ಛೇದಮುಂ ಅಕ್ಕುಂ ಅದಱಿಂದ ಎನ್ನನೆ ಕುಡಲ್ವೇೞ್ಕುಂ:ಪಂಪಭಾ, ೩. ೨೫ ವ)

ಸಂತಪ್ತ

[ಗು] ಬಿಸಿಯಾದ (ಅಂತಸ್ಸ್ಫುರದತಿಸ್ಫಾರಸಮರೋಷ್ಮ ಸಂತಪ್ತಜಲ ಪ್ರತ್ಯೇಕಚುಳುಕಪಾನಮಾತ್ರ ಜಾನುದಘ್ನ ಜಲದುರ್ಗನುಮಾಗಿ: ಆದಿಪು, ೧೪. ೫೨ ವ)

ಸಂತಪ್ತಚಿತ್ತ

[ನಾ] ಬೆಂದ ಮನಸ್ಸು (ಅಜ್ಞಾನಿಯವೋಲ್ ನೀನುಂ ಶೋಕಾನಲಸಂತಪ್ತಚಿತ್ತನಪ್ಪುದು ದೊರೆಯೇ: ಪಂಪಭಾ, ೧೧. ೧೦೮)

ಸಂತರ್ಪಣಕರ

[ಗು]ಸಂತೋಷಕರ (ಕಂದರ್ಪಸುಖನಿಲಯಮೆನೆ ಸಂತರ್ಪಣಕರಮಖಿಲಭೋಗಭೂಮಿ ವಿಭಾಗಂ:ಆದಿಪು,೫. ೨೮)

ಸಂತಸ

[ನಾ]ಸಂತೋಷ(ಮನದೊಳ್ ತ್ರೈಭುವನಮಂ ಆಳ್ದನಿತುವರಂ ತನಗೆ ಸಂತಸಂ ಪೆರ್ಚಿಯುಂ ಅಂದು ಇನಿಸು ಅಂಧನೃಪಂ ತನ್ನಯ ಜನದೊಳ್ ಕೆಲನಱಿಯೆ ಕೃತಕಶೋಕಂಗೆಯ್ದಂ:ಪಂಪಭಾ, ೩. ೮)

ಸಂತಸವಾತು

[ನಾ]ಸಂತೋಷದ ನುಡಿ, ವಾರ್ತೆ (ಬರವಿನೊಳಾದದೊಂದು ಮೊಗರಾಗಮೆ ಸಂತಸವಾತಂ ಅಂತು ಅನಕ್ಷರಮಱಿಪುತ್ತುಂ ಇರ್ಪಿನೆಗಂ:ಆದಿಪು, ೩. ೮೫)

ಸಂತಾನ

[ನಾ] ಸಾಲು, ಪಂಕ್ತಿ (ಪುರುದೇವಾದಿ ಜಿನೇಂದ್ರಮಾಳೆ ಗಣಭೃತ್ಸಂತಾನಮೆಂದೀ ಪರಂಪರೆಯಿಂ ವಿಶ್ರುತವೀರಸೇನ ಜಿನಸೇನಾಚಾರ್ಯ ಪರ್ಯಂತಮಾಗಿರೆ ಬದ ಈ ಕಥೆ: ಆದಿಪು, ೧. ೩೫); [ನಾ] ಅವಿಚ್ಛಿನ್ನ (ಸದೃಶಾಪರಾಪರೋತ್ಪತ್ತಿಯೆಂಬಿವಱಿಂ ವಿಪ್ರಲಬ್ಧಬುದ್ಧಿಗೆ ಸಂತಾನರೂಪದಿಂ ಪುಟ್ಟುತ್ತಿರ್ದ ವಿಜ್ಞಾನಲಕ್ಷಣಂಗಳ್ ಆತ್ಮಾಭಿಧಾನಮಂ ಪುಟ್ಟಿಸುಗುಂ: ಆದಿಪು, ೨. ೯ ವ); [ನಾ] ಸ್ವರ್ಗದಲ್ಲಿ ಇರುವುದೆಂದು ನಂಬಲಾದ ಮಂದಾರ, ಕಲ್ಪವೃಕ್ಷ, ಹರಿಚಂದನ, ಪಾರಿಜಾತ ಮತ್ತು ಸಂತಾನಗಳೆಂಬ ಮರಗಳಲ್ಲಿ ಒಂದು, ಅದರ ಹೂ (ಅಂತು ನಿಷ್ಪನ್ನಮಜ್ಜನಂ ವಿನಿಹಿತನೀರಾಜನನುಮಾಗಿ ಸುರರಾಜನ ಸಮರ್ಪಿತ ಸಂತಾನಕುಸುಮದಾಮಾಂಬರ ಭೂಷಣಪ್ರಸಾಧಿತಂ: ಆದಿಪು, ೮. ೭೧ ವ); [ನಾ] ಸಮೂಹ (ಅಧಿಕಬಳನಳಕರತಳಗಳಿತ ಕುಳಶೈಲಸಹಸ್ರ ಸಂತಾನ ಕಳಿತ ಸೇತುಬಂಧುರಮಪ್ಪ ದಕ್ಷಿಣಸಮುದ್ರದ ತಡಿವಿಡಿದು ಬಂದು: ಪಂಪಭಾ, ೪. ೧೮ ವ)

ಸಂತಾನರೂಪ

[ನಾ] [ಜೈನ] ಅನುಭವಕ್ಕೆ ಬಾರದ ಕ್ಷಣಗಳ ಸಮೂಹ (ವಿಪ್ರಲ್ಧಬುದ್ಧಿಗೆ ಸಂತಾನರೂಪದಿಂ ಪುಟ್ಟುತ್ತಿರ್ದ ವಿಜ್ಞಾನಲಕ್ಷಣಂಗಳ್ ಆತ್ಮಾಭಿಧಾನಮಂ ಪುಟ್ಟಿಸುಗುಂ: ಆದಿಪು, ೨. ೯ ವ)

ಸಂತಾನಸೃಕ್

[ನಾ]ಸಂತಾನವೃಕ್ಷದ ಪುಷ್ಪಮಾಲೆ (ದಿವ್ಯ ಸಂತಾನಸೃಕ್ ಮಣಿಭೂಷಣಾಂಬರಧರಂ ಸ್ವಾಧೀನ ಸಂಗತ್ವಸಂತಾನಂ .. .. ಪಾಲಿಸಿದಂ ಮಹೀತಳಮಂ:ಆದಿಪು, ೮. ೭೭)

ಸಂತಾಪ

[ನಾ]ದುಃಖ (ನೀಳ್ದ ಮಾವಿನ ಪೋೞಂದದ ಕಣ್ಗೆ ಬಾಷ್ಪಜಲಮಂ ಚಿತ್ತಕ್ಕೆ ಸಂತಾಪಮಂ ನಿನಗಂ ಮಾಡಿದವನಾತಂ ಆತನೆ ವಲಂ ಗಂಧೇಭವಿದ್ಯಾಧರಂ:ಪಂಪಭಾ, ೪. ೬೪)

ಸಂತಾಪನ

[ನಾ]ಪರಿತಪಿಸುವುದು (ಕಾಮಗ್ರಹಗ್ರಹೀತೆಯಾಗಿರೆಮನೋವೈಕಲ್ಯರೋಮಾಂಚಕಸ್ತಂಭಕಂಪಸ್ವೇದವೈವರ್ಣ್ಯಸಂತಾಪನಅನಾಹಾರವ್ಯಾಮೋಹಗದ್ಗದಾಶ್ರುಮೋಕ್ಷಮೂರ್ಛಾದಿನಾನಾವಿಕಾರಂಗಳಂಒಡನೊಡನೆತೋಱುವುದುಂ:ಪಂಪಭಾ,೪.೫೯ವ);[ನಾ]ಮನ್ಮಥನ ಐದು ಬಾಣಗಳಲ್ಲಿ ಒಂದು (ಮನೋಮಥನ ಮದನ ಮೋಹನ ಸಂತಾಪನ ವಶೀಕರಣಂಗಳೆಂಬ ಕಾಮದೇವನ ಅಯ್ದರಲಂಬಿನ ಶಕ್ತಿಗಳುಮನೊಂದುಮಾಡಿ:ಪಂಪಭಾ,೪. ೭೫ ವ)

ಸಂತಾಪರೂಪ

[ನಾ]ದುಃಖರೂಪವಾದ(ಬಾದೇನ್ ಆ ಮದೀಯ ಕರ್ಮಫಳೋದಿತ ಸಂತಾಪರೂಪ ಪಾಪಕಳಾಪ ವಿಚ್ಛೇದನಕರಮಾಯ್ತು ಭವತ್ ಪಾದಪ್ರಕ್ಷಾಳನ ಉದಕದಿಂ ಮುನಿನಾಥಾ:ಪಂಪಭಾ, ೬. ೧೩)

ಸತಿಯರಿರ್ವರ್

[ನಾ]ಇಬ್ಬರೂ ಹೆಂಗಸರು (ಪುತ್ರವರಾರ್ಥಿಗಳಾಗಿತನ್ನಕಟ್ಟಿದಿರೊಳೆನಿಂದರಂನಯದೆನೋಡೆಮುನೀಂದ್ರನದಿವ್ಯದೃಷ್ಟಿಮಂತ್ರದೊಳೆಪೊದಳ್ದುದಾಸತಿಯರಿರ್ವರೊಳಂನವಗರ್ಭವಿಭ್ರಮಂ:ಪಂಪಭಾ,೧.೮೫)

ಸಂತೆ

[ನಾ][ಸಂಸ್ಥಾ] ಗುಂಪು (ಆಗಳ್ ಆಱುಂ ಋತುಗಳ ಪೂಗಳಂ ಒಂದುಮಾಡಿ ಪೂವಿನಂಬುಗಳಂ ಪಣ್ಣಲೆಂದು ಕಾಮದೇವಂ ಮಾಡಿದ ಓಜನ ಸಾಲೆಯಿರ್ಪಂತಿರ್ಪ ಪೂವಿನ ಸಂತೆಯೊಳ್:ಪಂಪಭಾ, ೪. ೮೦ ವ)

Search Dictionaries

Loading Results

Follow Us :   
  Download Bharatavani App
  Bharatavani Windows App