भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಸತ್ತಿ

? (ನೆಲವಡಲಗೆಯ ಜಾಗಂಗಳುಮಂ ಅವನೆ ಸಂಗಡಂಗೊಂಡಿರ್ದ ಸತ್ತಿಸಂಗಡಂಗಳುಂ:ಆದಿಪು, ೮. ೧೫ ವ)

ಸತ್ತಿಗೆ

[ನಾ][ಛತ್ರಿಕಾ]ಕೊಡೆ (ತುರಗಮುಮೊಂದು ಸತ್ತಿಗೆಯೊಂದಿರೆ ಕಾಪಿನ ಬಂಟು ಸುತ್ತಲುಂ ಬರೆ:ಆದಿಪು, ೧೧. ೪೬)

ಸತ್ತ್ವ

[ನಾ]ಶಕ್ತಿ, ಬಲ (ಕೊಲಲ್ಕೆ ಸತ್ತ್ವಮಪ್ಪಂತಿರೆ ಮುಂ ಪೊಡೆವೆಂ ಕೂೞಂ ಬೞಿಯಿಂ ಪೊಡೆವೆಂ ರಕ್ಕಸನಂ:ಪಂಪಭಾ, ೩. ೨೯);[ನಾ]ಸತ್ತ್ವಗುಣ (ಸತ್ತ್ವರಜಸ್ತಮಂಗಳುಂ ಕಾಣಲಾದುವು ಎರಡುಂ ಪಡೆಯೊಳ್:ಪಂಪಭಾ, ೧೦. ೬೯)

ಸತ್ಪಥಾತಿಥಿ

[ನಾ]ಆಕಾಶಗಾಮಿ (ಚಾರಣ ಮುನೀಂದ್ರರ್ ಬೆಸಸಿ ಸತ್ಪಥೋನ್ನತಿಯಂ ನನ್ನಿಮಾಡುವಂತೆ ಸತ್ಪಥಾತಿಥಿಗಳಾದರ್:ಆದಿಪು, ೫. ೨೦ ವ)

ಸತ್ಯವತೀನಂದನ

[ನಾ]ಸತ್ಯವತಿಯ ಮಗ, ವ್ಯಾಸ (ಸತ್ಯವತೀನಂದನಂ ತನ್ನ ಮಕ್ಕಳ ಸಾಯಸಂಗಳ್ಗೆ ಮನ್ಯುಮಿಕ್ಕು ಕಣ್ಣ ನೀರಂ ನೆಗಪೆ:ಪಂಪಭಾ, ೭. ೫೯ ವ)

ಸತ್ವ

[ನಾ]ಸತ್ವಗುಣ ಮತ್ತು ಬಿಳಿಪು (ಸಂತಸಮಂಮಱುಕಕ್ಕೆಮಾಣ್ದೊಡೆಈನಡೆಗಿಡೆಸತ್ವಮಂತಮಮುಮಂಕಡೆಗಣ್ಣೊಳೆಕಂಡೆನೋಪಳಾ:ಪಂಪಭಾ,೪.೭೮)

ಸಂದಣಿ

[ನಾ]ಗುಂಪು (ದಂದುಗದ ಸಂದಣಿಯಿಂದಮೆ ಮತ್ ಪ್ರಾಗ್ಜನ್ಮ ಕಥಾವಳಿಯೆಲ್ಲಮಂ ಬಗೆದು ನೋವಾದುದು:ಆದಿಪು, ೩. ೩೩);[ನಾ]ಸಮೂಹ (ಬಳಸಿದ ವೇದಪಾರಗರ ಸಂದಣಿಯೆಂಬಿವಱಿಂ ವಿವಾಹಮಂಗಳಮದು ಕುಂತಿಮಾದ್ರಿಗಳೊಳಚ್ಚರಿಯಾದುದು ಪಾಂಡುರಾಜನಾ:ಪಂಪಭಾ, ೧. ೧೦೭)

ಸಂದಣಿಸು

[ಕ್ರಿ]ಗುಂಪಾಗು(ಸರಳ ಪೊದಳ್ದ ಬಲ್ಸರಿಯ ಕೋಳ್ಗಿರಲಾಱದೆ ತೆರಳ್ದು ದುರ್ಧರ ಹಯಂ ಅೞ್ಗಿ ಸಂದಣಿಸಿ ಸಂದಣಿ ಕೋಳ್ಗುದಿಗೊಂಡು:ಪಂಪಭಾಪರಿಷತ್ತು, ೩. ೭೦)

ಸಂದರ್ಭ

[ಗು] ಸೇರಿಸಿದ, ಕೂಡಿಸಿದ (ಪಂಚರತ್ನಗರ್ಭ ವಿವಿಧೌಷಧಿಸಂದರ್ಭ ಶಾತಕುಂಭಕುಂಭ ಸಂಭೃತ ಮಂಗಳಜಳಂಗಳಿಂದಂ: ಆದಿಪು, ೪. ೩೫ ವ)

ಸಂದಂಶ

[ನಾ]ಔಡು ಕಚ್ಚುವುದು (ಉದಾರವೀರಚರಿತನಿರತ ಕದನಕರ್ಕಶಕ್ಷತ್ರಿಯಂಗೆ .. .. ನಿರರ್ಥಕನಿಷ್ಠುರೋಷ್ಠಪುಟ ಸಂದಂಶಮುಂ .. .. ತಕ್ಕುದಲ್ತು:ಆದಿಪು,೧೪. ೮೧ ವ)

ಸದಾದಿ

[ನಾ][ಜೈನ] ಸ್ಯಾದ್ವಾದ, ಪದಾರ್ಥದ ಪೂರ್ಣಜ್ಞಾನವನ್ನು ತಿಳಿಯಲೋಸುಗ ಒಂದು ಗುಣವನ್ನು ಪ್ರಧಾನವಾಗಿರಿಸಿಕೊಂಡು ಇತರ ಗುಣಗಳನ್ನು ಗೌಣವಾಗಿಸಿ ಪರೀಕ್ಷಿಸುವುದು, ಆನಂತರ ಇನ್ನೊಂದು ಹೀಗೆ ಭಾಗಶಃ ಪರೀಕ್ಷಿಸುತ್ತ ಅದನ್ನು ಸಮಗ್ರವಾಗಿ ತಿಳಿದುಕೊಳ್ಳುವುದು (ಪ್ರಮಾಣ ನಯ ನಿಕ್ಷೇಪ ಅನುಯೋಗ ಸದಾದಿಗಳಿಂ ನಿಶ್ಚಯಿಸಿದ ಸಪ್ತತತ್ತ್ವಂಗಳೊಳಗೆ ಚೇತನಾಲಕ್ಷಣಮಪ್ಪುದು ಜೀವತತ್ತ್ವಂ: ಆದಿಪು, ೧೦. ೬೩ ವ)

ಸದಾನಿ ಕೇತನ

[ನಾ]ದಾನಿಗಳಿರುವ ಮನೆ (ಸದಾನಿಕೇತನಂಗಳಿಂ ಧನದಭವನಮೆನಿಪ ಸಿರಿಯ ಬಚ್ಚರಾಪಣಂಗಳಿಂ:ಪಂಪಭಾ೧. ೫೮)

ಸದಾಸಿಂದು

[ಗು]ಯಾವಾಗಲೂ ಹರಿಯುವ(ಕಂಚ ಆಕಸ್ಮಿಕ ಪಾಂಸುಪಲ್ಲವ ಜಳಸ್ಯಂದೀ ಸದಾಸಿಂಧುರ್ ಅಪ್ರಾಗೇಯಂ ಪ್ರಿಯಗಳ್ಳಭೂಪತಿ ಚಮೂಪ್ರಸ್ಥಾನಮಾಚಕ್ಷತೇ:ಪಂಪಭಾ, ೯. ೯೭)

ಸಂದಿ

[ನಾ]ಕೀಲು (ಕಟಿ ಮುಮ್ಮಡಂ ಪರಡು ಸಂದಿ ನೊಸಲ್ ಪಣೆ ಕಣ್ ಕದಂಪಿನೆಡೆಯನೆ ನಟ್ಟುವು ಉರ್ಚಿದುವು ನೇರ್ದುವು ಸೀಳ್ದುವು ಪಾರ್ಥನಂಬುಗಳ್:ಪಂಪಭಾ,೧೧. ೧೩೬);

ಸದಿಗ್ವಳಯಯಾ

[ಗು]ದಿಙ್ಮಂಡಲಗಳಿಂದ ಕೂಡಿದ (ಸದಿಗ್ವಳಯಯಾ ಭುವಾ ಸಗಿರಿಸಾಗರದ್ವೀಪಯಾ:ಪಂಪಭಾ, ೪. ೨೭)

ಸಂದಿಸು

[ಕ್ರಿ]ಹಿಂಬಾಲಿಸು (ಮುಂದಣ ಮಿಗಮಂ ಕೞಿಪದೆ ಸಂದಿಸಿ ಬೞಿಗೊಳ್ವ ಮಿಗಮುಮಂ ಕೞಿಪದೆ ತಾನೊಂದಳವಿಳಿದಪ್ಪದೆಚ್ಚು ಬಲಿಂದಮನಿಂ ಬಿಲ್ಲ ಬಲ್ಮೆಯಂ ಪೊಗೞಿಸಿದಂ:ಪಂಪಭಾ,೫. ೪೮);[ಕ್ರಿ]ಸೇರು (ಎರಡು ಪೋೞುಮಂ ಒಂದು ಕೆಯ್ಯೊಳೆ ಪಿಡಿದೊಡೆ ಒಂದೊಂದಱೊಳ್ ಸಂದಿಸಿ ಮಾನಸರೂಪುಗೊಂಡೊಡೆ:ಪಂಪಭಾ, ೬. ೨೬ ವ)

ಸಂದು

[ನಾ]ಮೂಲೆ (ದೆಸೆಗಳ ಸಂದಂ ಪಱಿದಾಗಸದಿಂದಂ ಪತ್ತುವಿಡಿಸುವಂತೆ:ಆದಿಪು,೧೨. ೫೪)

ಸದೆ

[ಕ್ರಿ]ಬಡಿ, ಚಚ್ಚು (ತುಱುವಂ ಮಗುೞ್ಚಿ ಮಗುೞದೆ ತನಗಿದಿರೊಡ್ಡಿ ನಿಂದ ಅರಿನೃಪಬಲಮಂ ಅರೆದು ಸದೆದು:ಪಂಪಭಾ, ೮. ೧೦೪ ವ)

ಸಂದೆಯ

[ನಾ]ಸಂದೇಹ (ನೀನುಂ ಸಂದೆಯಗುಣಮಿಲ್ಲದೆ ಇದನೆ ನಂಬಿ ಇನಿತಂ ನೀನೊಂದಿದ ನಾರೀರೂಪದ ದಂದುಗದೊಳ್ ತೊಡರ್ದು ಬಿಡದೆ ನವೆಯುತ್ತಿರ್ಪೈ:ಆದಿಪು, ೫. ೬೨);[ನಾ]ಗೊಂದಲ (ಪಿರಿದೊಂದು ಸಂದೆಯದೆ ನೋಡೆ ಪೋಗಿಂತಿವಳ್ ನರಾಂಗನೆಯಿವಳ್ ಸುರಾಂಗನೆ ದಲ್ ಎಂಬಿನಂ:ಆದಿಪು, ೮. ೨೧)

ಸಂದೋಹ

[ನಾ]ಸಮೂಹ, ರಾಶಿ (ಹಿಮಕೃದ್ಭೂಧರದಂತೆ ನಿನ್ನ ಗುಣಸಂದೋಹಂಗಳಂ ಕಾಣಲಕ್ಕುಮೆ ಮತ್ತೊರ್ವನೊಳ್:ಪಂಪಭಾ, ೫. ೭೬)

Search Dictionaries

Loading Results

Follow Us :   
  Download Bharatavani App
  Bharatavani Windows App