Pampana Nudigani (Kannada)
Kamadhenu Pustaka Bhavana
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಸದ್ಗೃಹತ್ವ
[ನಾ][ಜೈನ] ಏಳರಲ್ಲಿ ಒಂದು ಬಗೆಯ ಪರಮಸ್ಥಾನ, ಇಷ್ಟವಾದುದನ್ನು ತೊರೆದು ಆತ್ಮಶುದ್ಧಿಮಾಡಿಕೊಳ್ಳುವುದು (ಸಜ್ಜಾತಿ ಸದ್ಗೃಹತ್ವ ಪಾರಿವ್ರಾಜ್ಯಪದ ಸುರೇಂದ್ರತ್ವ ಸಾಮ್ರಾಜ್ಯ ಪರಮಾರ್ಹಂತ್ಯ ಪರಿನಿರ್ವಾಣಮೆಂಬ ಏೞುಂ ಪರಮಸ್ಥಾನನಾಮಂ:ಆದಿಪು,೧೫. ೧೬ ವ)
ಸದ್ದ
[ನಾ][ಶಬ್ದ] ಸದ್ದು (ಬದ್ದವಣದ ಪಱೆಗಳ್ ಕಿವಿ ಸದ್ದಂಗಿಡೆ ಮೊೞಗೆ ದೇವದುಂದುಭಿರವಂ ಒಂದು ಉದ್ದಾನಿ ನೆಗೞೆ ಮುಗುಳ ಅಲರ ಒದ್ದೆ ಕರಂ ಸಿದ್ಧಮಾದುದು ಅಂಬರತಲದೊಳ್:ಪಂಪಭಾ, ೧೨. ೨೧೮)
ಸದ್ಭ್ರಾಂತ
[ಗು]ಜೋರಾಗಿ ಬೀಸುತ್ತಿರುವ (ಸದ್ಭ್ರಾಂತಸಮೀರಣೋತ್ಥಿತ ವಿಶಾಳವಿಳೋಳತರಂಗರೇಖೆ:ಪಂಪಭಾ,೩. ೫೭)
ಸದ್ಯಃಪ್ರಸೂತಿ
[ನಾ]ಆ ಕ್ಷಣವೇ ಹೆರಿಗೆ (ಈಶ್ವರಕಲ್ಪಿತದಿಂ ರಾಕ್ಷಸರ್ಗೆ ಸದ್ಯೋಗರ್ಭಂ ಸದ್ಯಃಪ್ರಸೂತಿಯುಂ ಸದ್ಯೋಯೌವನಮುಂ ಉಳ್ಳ ಕಾರಣದಿಂದೆ:ಪಂಪಭಾ, ೩. ೨೦ ವ)
ಸದ್ಯಸ್ತನ
[ನಾ]ಆಗತಾನೇ ಅರಳಿದ (ನೂತನಪ್ರಸ್ತುತ ಸುರಭಿಸುಧಾ ಕ್ಷೀರಧಾರಾಭಿಷೇಕಾರ್ಚನೆಯಂ ಸದ್ಯಸ್ತನ ಅಖಂಡಳ ವನಸುಮ ಮನೋಮಾಲಿಕಾಲಂಬ ಲೀಲಾರ್ಚನೆಯಂ:ಆದಿಪು, ೧೪. ೧೧೬)
ಸದ್ಯಸ್ಸಂತಾಪಿತ
[ಗು] [ಸದ್ಯಃ+ಸಂತಾಪಿತ] ಆಗ ತಾನೇ ಕಾಯಿಸಿದ (ಸದ್ಯಃ ಸಂತಾಪಿತ ಲೋಹಪುತ್ರಿಕಾಪರಿರಂಭಸಂಭೃತ ಪ್ಲೋಷಚಲಜ್ಜಾಂಗಳಗಳತ್ ರುಧಿರ: ಆದಿಪು, ೫. ೮೭ ವ)
ಸದ್ಯೋಗರ್ಭ
[ನಾ]ಆ ಕ್ಷಣವೇ ಗರ್ಭ ನಿಲ್ಲುವುದು (ಈಶ್ವರಕಲ್ಪಿತದಿಂ ರಾಕ್ಷಸರ್ಗೆ ಸದ್ಯೋಗರ್ಭಂ ಸದ್ಯಃಪ್ರಸೂತಿಯುಂ ಸದ್ಯೋಯೌವನಮುಮುಳ್ಳ ಕಾರಣದಿಂದೆ:ಪಂಪಭಾ, ೩. ೨೦ ವ)
ಸದ್ಯೋಯೌವನ
[ನಾ]ಆಕ್ಷಣವೇ ತಾರುಣ್ಯಪ್ರಾಪ್ತಿ (ಈಶ್ವರಕಲ್ಪಿತದಿಂ ರಾಕ್ಷಸರ್ಗೆ ಸದ್ಯೋಗರ್ಭಂ ಸದ್ಯಃಪ್ರಸೂತಿಯುಂ ಸದ್ಯೋಯೌವನಮುಮುಳ್ಳ ಕಾರಣದಿಂದೆ:ಪಂಪಭಾ, ೩. ೨೦ ವ)
ಸದ್ವನಜವನ
[ನಾ]ಸುಂದರ ತಾವರೆಗಳ ಕೊಳ (ಅನುಯೋಗ ಕುಸುಮಪಾದಪಂ ಅನೇಕ ಲತಿಕ ಮಂಗಫಳಮಹಿಜಂ ಸದ್ವನಜವನಂ:ಆದಿಪು,೧. ೧೦)
ಸದ್ವಲ್ಲಭ
[ನಾ]ಒಳ್ಳೆಯ ರಾಜ ಹಾಗೂ ಒಳ್ಳೆಯ ಗಂಡ (ಆ ಜಾಕವ್ವೆಗಂ ವಸುಧಾಜಯ ಸದ್ವಲ್ಲಭಂಗಂ ವಿಶದ ಯಶೋರಾಜಿತನೆನಿಪರಿಕೇಸರಿ ರಾಜಂ ತೇಜೋಗ್ನಿಮಗ್ನ ರಿಪುನೃಪಶಲಭಂ:ಪಂಪಭಾ,೧. ೪೧)
ಸಂಧಾನ
[ನಾ][ಬಾಣ] ಹೂಡುವುದು (ಶರಸಂಧಾನ ಆಕರ್ಷಣ ಹರಣಾದಿ ವಿಶೇಷವಿವಿಧಸಂಕಲ್ಪಕಳಾಪರಿಣತಿಯಂ ಮೆಱೆದುದು:ಪಂಪಭಾ, ೧೨. ೧೮೬)
ಸಂಧಾನಂಗೆಯ್
[ಕ್ರಿ]ತಯಾರಿಸು (ಮೂಱುಂ ಕೊಂಡಂಗಳೊಳ್ ಉತ್ತರವೇದಿಕೆಯೊಳ್ ಅಗ್ನಿ ಸಂಧಾನಂಗೆಯ್ದು:ಪಂಪಭಾ, ೬. ೩೩ ವ)
ಸಂಧಾರಣ
[ನಾ]ಇಟ್ಟುಕೊಳ್ಳುವಿಕೆ(ಅನಿಷ್ಠುರೋಷ್ಠಪುಟಮಧ್ಯಸಂಧಾರಣಮಾತ್ರಚೂರ್ಣನೀಯಶಾಕವರ್ತಿಕಮುಮಂ:ಆದಿಪು,೧೧.೨೬ವ);[ನಾ]ಆಧಾರವಾಗಿರುವುದು(ಅಗಾಧಜಲದುರ್ಗಸಮುತ್ತರಣನಿರತಸಕಳಶಿಬಿರಸಂಧಾರಣಶಕ್ತಿಯುಕ್ತಮಪ್ಪವಜ್ರಮಯಮೆಂಬಚರ್ಮರತ್ನಮುಂ:ಆದಿಪು,೧೧.೩ವ)
ಸಂಧಾರಿತ
[ಗು]ತೊಡಿಸಿದ, ತೊಟ್ಟ (ಆರೋಪಿತಚಾಪಂ ಸಂಧಾರಿತಕವಚಂ ಧೃತೋಗ್ರಶರಧಿಯುಗಂ ತಾಂ:ಪಂಪಭಾ,೮. ೧೨)
ಸಂಧಿ
[ನಾ]ನಾಟಕದ ಒಂದು ಭಾಗ(ನಾಂದೀ ಪ್ರರೋಚನಾ ಪ್ರಸ್ತಾವನಾ ಇತಿವೃತ್ತ ಸಂಧಿ ಪ್ರವೇಶ ವಿಷ್ಕಂಭ ಕಪೋತಿಕಾ ವ್ಯಾಳಿಕಾದಿ ಲಕ್ಷಣೋಪೇತಂಗಳಪ್ಪ ನಾಟಕಂಗಳೊಳಂ:ಪಂಪಭಾ, ೨. ೩೪ ವ);[ನಾ]ಸೇರಿಕೆ (ಜಟಮಟಿಸಿಕೊಂಡು ನಿಮ್ಮೀ ಘಟಿಯಿಸುವ ಈ ಸಂಧಿ ಕೌರವರ್ಕಳೊಳ್ ಎನ್ನಿಂ ಘಟಿತ ಜರಾಸಂಧ ಉರಸ್ತಟ ಸಂಧಿವೊಲ್ ಒಂದೆ ಪೊೞ್ತಱೊಳ್ ವಿಘಟಿಸದೇ:ಪಂಪಭಾ, ೯. ೨೩);[ನಾ]ಕೀಲು (ಅಂತು ಸಂಧಿ ಸಂಧಿಯೊಳ್ ಸಹಸ್ರಸಿಂಹಬಲನೆನಿಪ ಸಿಂಹಬಲನಂ ಅಶ್ರಮದೊಳೆ ಕೊಂದು:ಪಂಪಭಾ, ೮. ೭೮ ವ)
ಸಂಧಿಬಂಧ
[ನಾ]ಕೀಲ್ಕಟ್ಟು (ದೆಸೆಗಳಂ ಮುಳಿದು ನೋಡಿ ಜರಾಸಂಧಸಂಧಿಬಂಧವಿಘಟನಂ ಇಂತೆಂದಂ:ಪಂಪಭಾ, ೧೩. ೭೫ ವ)
ಸಂಧಿಸು
[ಕ್ರಿ]ಕೂಡಿಸು, ಸೇರಿಸು (ಬಿಲ್ ರಥಂ ಧ್ವಜಂ ಎಂಬಿವಂ ಎಯ್ದೆ ಸಂಧಿಸು ಜಸಂ ನಿಲ್ವನ್ನೆಗಂ ಕಾದುವೆಂ:ಪಂಪಭಾ, ೧೧. ೧೬)
ಸಂಧ್ಯಾಭ್ರ
[ನಾ]ಸಂಜೆಯ ಆಕಾಶ (ಈಶಾನಕಲ್ಪದೊಳ್ ಅಪ್ರತಿಹತ ಚಂಚತ್ ಪಂಚರತ್ನಪ್ರಭಪ್ರಸರಪ್ರಕಟಿತ ಸಂಧ್ಯಾಭ್ರ ವಿಭ್ರಮಭ್ರಾಜಿಯಪ್ಪ ದಿವ್ಯತಳ್ಪತಳದ ಪೊರೆಯೊಳಗೆ:ಆದಿಪು, ೨. ೬೧ ವ)
ಸಂಧ್ಯಾರಾಗ
[ನಾ]ಸಂಜೆಯ ಬಣ್ಣ (ಸಂಧ್ಯಾರಾಗಮವರ ಮನದನುರಾಗಮಂ ಅನುಕರಿಸುವಂತುಟಾಗೆ ಬೞಿಯಂ ಕ್ರಮಕ್ರಮದೊಳ್:ಪಂಪಭಾ, ೪. ೪೮ ವ)
ಸಂಧ್ಯಾವಂದನೆ