Pampana Nudigani (Kannada)
Kamadhenu Pustaka Bhavana
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಸನತ್ಕುಮಾರ
[ನಾ][ಜೈನ] ಹದಿನಾರು ಬಗೆಯ ಸ್ವರ್ಗಗಳಲ್ಲಿ ಒಂದು (ತತ್ ಕರವಿಭ್ರಮದಿಂ ಪದಪೊದವೆ ಸನತ್ಕುಮಾರ ಮಾಹೇಂದ್ರರಿಕ್ಕಿದರ್ ಚಾಮರಮಂ:ಆದಿಪು, ೭. ೫೦)
ಸನಾಭಿ
[ನಾ]ನಂಟ (ಅಂತನುವಱಿದು ಒಸಗೆಯೊಳಮರರಾಜನುಂ ಸನಾಭಿಗಳ್ ವೆರಸು ನಾಭಿರಾಜನುಂ ಬಂದು:ಆದಿಪು, ೮. ೨೨ ವ);[ನಾ]ದಾಯಾದಿ (ವಿನಯಮುಂ ಎಱಕಮುಂ ಅಪ್ಪುದು ಸನಾಭಿಗಳ್ ಸಂಗತಗಳಪ್ಪೊಡೆ ಪೆಸರ್ಗೊಂಡನಿತಱೊಳ್ ಎನ್ನಂ ಸೈರಿಸನೆನೆ ಭರತಂಗೆಱಗಿ ಲೋಕದಿಂ ನಗಿಸುವೆನೇ:ಆದಿಪು, ೧೪. ೭೬)
ಸನಾಭಿಜನ
[ನಾ]ನೆಂಟರು (ಚರ್ಯಾಮಾರ್ಗದೊಳ್ ನಡೆವಲ್ಲಿ ಜನಪದ ಪುರ ಸನಾಭಿಜನಂಗಳ್ ಕಂಡರ್ ಕಂಡಲ್ಲಿಯೆ ಮುಸುಱಿಕೊಂಡು:ಆದಿಪು, ೯. ೧೨೪ ವ)
ಸನಿಯನ್ನಳ್
[ನಾ]ಶನಿಯಂತಹವಳು (ಕನಲ್ವುದರ್ಕೆ ಅಳವಿಯುಂ ಅಂತುಂ ಇಲ್ಲ ಸನಿಯನ್ನಳೆ ಕುಂಟಣಿ ಪೋದ ಮಾರಿಯನ್ನಳೆ:ಪಂಪಭಾ, ೪. ೯೮)
ಸನ್ನಣ
[ನಾ][ಸನ್ನಾಹ] ಯೋಧರ ಯುದ್ಧ ಕವಚ (ಮಸೆಯಿಪ ಶಸ್ತ್ರಕೋಟಿ ಸಮಕಟ್ಟಿನ ಸನ್ನಣಂ ಅೞ್ತಿಯಿಂದಂ ಅರ್ಚಿಸುವ ತುರಂಗದಂತಿರಥಸಂಕುಳಂ:ಆದಿಪು, ೧೪. ೯೦)
ಸನ್ನಣಂದುಡು
[ಕ್ರಿ]ಕವಚವನ್ನು ಧರಿಸು (ಸನ್ನಣಂದುಡುವ ಪಣ್ಣುವ ಬಾೞ್ತೆಯವಂದಿರಂ ಮರುಳ್ಗೊಂಡವೊಲ್ ಊಳ್ವ:ಪಂಪಭಾ,೧೦. ೪೯)
ಸನ್ನತ
[ನಾ]ಬಾಗುವಿಕೆ (ಸನ್ನತದಿಂ ರತಕ್ಕೆಳಸಿ ನಲ್ಲಲೊಳ್ ಓತು ಒಡಗೂಡಿದೆನ್ನಂ ಇಂತೆನ್ನಯ ಮೆಚ್ಚುದರ್ಕೆ ಪೆಱತಿಲ್ಲ ಅದು ದಂಡಂ;ಪಂಪಭಾ,೧. ೧೧೨)
ಸನ್ನಹಿತ
[ಗು]ಅಲಂಕಾರಗೊಂಡ (ಸಹಜದ ಚೆಲ್ವಿನೊಳ್ ರತಿಯ ಸೋಲದ ಕೇಳಿಕೆಯೊಳ್ ಪೊದಳ್ದು ಸನ್ನಿಹಿತವೆನಿಪ್ಪಪೂರ್ವ ಶುಭಲಕ್ಷಣ ದೇಹದೊಳೊಳ್ಪನಾಳ್ದು:ಪಂಪಭಾ, ೧. ೪)
ಸನ್ನಾಹಕರ್ಮ
[ನಾ]ಯುದ್ಧಕಾರ್ಯ (ಶುಭಲಕ್ಷಣಲಕ್ಷಿತನುಂ ಸನ್ನಾಹಕರ್ಮ ನಿರ್ಮಿತನುಂ ಹಸ್ತಾಯುಧಕುಶಳನುಂ ಭದ್ರಮನನುಂ ಅಪ್ಪ ವಿಜಯಗಜಮಮುಂ:ಪಂಪಭಾ, ೧೦. ೪೬ ವ)
ಸನ್ನಾಹಭೇರಿ
[ನಾ]ಸೈನ್ಯಸಿದ್ಧತೆಯ ಸೂಚನೆ ನೀಡಲು ಹೊಡೆಯುವ ಭೇರಿ (ಒಡೆದೊಂದು ತತ್ತಿಯವೊಲಾಯ್ತು ಎಂಬೊಂದು ಸಂದೇಹಮಂ ಪೊಸತಂ ಭೂಭವನಕ್ಕೆ ಮಾಡಿದುದು ತತ್ ಸನ್ನಾಹಭೇರೀರವಂ:ಪಂಪಭಾ, ೯. ೯೪)
ಸನ್ನಿಕಾಶ
[ನಾ]ಸಮಾನ (ಪ್ರಕುಪಿತಮೃಗಪತಿಶಿಶುಸನ್ನಿಕಾಶರ್ ಅತಿವಿಕಟಭೀಷಣಭ್ರೂಭಂಗರ್:ಪಂಪಭಾ, ೭. ೮)
ಸನ್ನೆ
[ನಾ]ಸಂಕೇತ (ಕಾಣ್ಬರಂಕುಸನಾ ಪಾಣ್ಬೆಯರ ಗೆಯ್ವ ಗೆಯ್ತಂಗಳುಮಂ ತೋರ್ಪ ಸನ್ನೆಗಳುಮಂ ಆಡುವ ಮಿೞ್ತುಗೊಡ್ಡಂಗಳುಮಂ ಕಂಡು:ಪಂಪಭಾ, ೪. ೮೩ ವ)
ಸನ್ಮಾನ
[ನಾ]ಗೌರವ (ಸನ್ಮಾನದಾನಾದಿಗಳೊಳ್ ಸಂತಸಂಬಡಿಸಿ:ಆದಿಪು, ೧೩. ೪೧ ವ)
ಸನ್ಯಸನವಿಧಿ
[ನಾ]ಸನ್ಯಸನದ ಮೂಲಕ ಪ್ರಾಣತ್ಯಾಗ ಮಾಡುವುದು (ಚಂದ್ರಸೇನಾಚಾರ್ಯರ ಶ್ರೀಪಾದಪದ್ಮ ಪಾರ್ಶ್ವದೊಳ್ ಸನ್ಯಸನವಿಧಿಯೊಳ್ ಪರಿತ್ಯಕ್ತಾಹಾರಶರೀರನೆಂ ಸಮಾಧಿವಡೆದು:ಆದಿಪು,೩. ೫೦ ವ)
ಸಪತ್ನಿ
[ಗು]ಹೆಂಡತಿಯ ಜೊತೆ (ಷೋಡಶ ಋತ್ವಿಜರ್ಕಳಿಂ ಬೇಳಲ್ವೇೞ್ದು ಧರ್ಮಪುತ್ರಂ ಸಪತ್ನಿ ಯಜಮಾನನಾಗಿರ್ದಾಗಳ್:ಪಂಪಭಾ, ೬. ೩೩ ವ)
ಸಪರ್ಯಾ[ರ್ಯೆ]
[ನಾ]ಪೂಜಾ ಸಾಮಗ್ರಿ (ಸ್ವಯಂಬುದ್ಧಂ ಅಗಣ್ಯ ಪುಣ್ಯೋಪಾರ್ಜನಕರ ಸಪರ್ಯಾಸಮೇತಂ ಅಪರಿಮಿತ ಭಕ್ತಿಯಿಂ ಪರಿಮಿತಪರಿಜನಪರಿವೃತನಾಗಿ:ಆದಿಪು, ೨. ೨೪ ವ);[ನಾ]ಪೂಜೆ (ಎರಡುಂ ವಿಚಾರಿಸುವ ನೃಪಂಗೆ ಆವೊಗೆದ ಪುಣ್ಯಬಂಧಮನಾವರಿಸುವ ಜಿನಸಪರ್ಯೆ ತೊಡರ್ದುದು ಬಗೆಯೊಳ್:ಆದಿಪು, ೩. ೨೮)
ಸಪಾದಲಕ್ಷ ಕ್ಷಿತಿ
[ನಾ]ಸಪಾದಲಕ್ಷವೆಂಬ ಪ್ರದೇಶ (ಆತಂ ನಿಜವಿಜಯಖ್ಯಾತಿಯನಾಳ್ದು ಆಳ್ದನಧಿಕಬಲನವನಿಪತಿವ್ರಾತ ಮಣಿ ಮಕುಟ ಕಿರಣದ್ಯೋತಿತ ಪಾದಂ ಸಪಾದ ಲಕ್ಷಕ್ಷಿತಿಯಂ:ಪಂಪಭಾ, ೧. ೧೬)
ಸಂಪೂರ್ಣ ಮನೋರಥ
[ನಾ]ಉದ್ದೇಶ ನೆರವೇರಿದವನು (ಆಗಳ್ಸ್ವಾಹಾಂಗನಾನಾಥಂಸಂಪೂರ್ಣಮನೋರಥನಾಗಿಖಟ್ವಾಂಗನೆಂಬಅರಸನಯಜ್ಞದೊಳ್ಆತನತಂದಘೃತಸಮುದ್ರಮಂಕುಡಿದೊಡೆ:ಪಂಪಭಾ,೫.೧೦೪ವ)
ಸಂಪೂರ್ಣ ವಯಸ್ಕ
[ನಾ]ತುಂಬಿದ ಪ್ರಾಯದವನು (ಅಂತುನೂರ್ವರೊಳ್ಒರ್ವನಅಗುರ್ಬುಪರ್ಬಿಪರಕಲಿಸೆಸಂಪೂರ್ಣವಯಸ್ಕನಾಗಿಘೃತಘಟವಿಘಟನನುಮಾಗಿಪುಟ್ಟುವುದುಂ:ಪಂಪಭಾ,೧.೧೩೧ವ)
ಸಂಪೃಕ್ತ