Pampana Nudigani (Kannada)
Kamadhenu Pustaka Bhavana
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಸಪ್ತಕಕ್ಷಾ
[ನಾ]ಏಳು ಅಂಕಣ (ಶ್ರೀಸಪ್ತಕಕ್ಷಾಸಮನ್ವಿತ ಆಲೋಲದುಕೂಲಕೇತನಕುಳಂ . .. ಚೆಲ್ವಾಯ್ತು ರಾಜಾಲಯಂ:ಆದಿಪು, ೬. ೧೦೭)
ಸಪ್ತಗುಣ
[ನಾ][ಜೈನ] ಶ್ರದ್ಧೆ, ಶಕ್ತಿ, ಭಕ್ತಿ, ವಿಜ್ಞಾನ ಅಲುಬ್ಧಿತ, ಕ್ಷಮೆ, ತ್ಯಾಗಗಳೆಂಬ ಏಳು ಗುಣಗಳು (ಶ್ರದ್ಧಾದಿ ಸಪ್ತಗುಣಸಂಪನ್ನನುಂ ಪ್ರತಿಗ್ರಹಾದಿ ನವವಿಧಪುಣ್ಯ ಪುರಸ್ಸರನುಮಾಗಿ:ಆದಿಪು, ೧೦. ೧ ವ)
ಸಪ್ತಚ್ಛದ
[ನಾ]ಏಳು ಸುತ್ತಿನ ಬಾಳೆ ಗಿಡ (ಅಶೋಕ ಸಪ್ತಚ್ಛದ ಚಂಪಕ ಚೂತ ಪಾದಪ ಉಪಶೋಭಿತಮುಂ ಏಕಯೋಜನ ಪ್ರಮಾಣ ವಿಸ್ತಾರಮುಂ:ಆದಿಪು೧೦. ೩೧ ವ)
ಸಪ್ತತಳ
[ನಾ] ಏಳು ಮಹಡಿ (ಅನುಸ್ಮರಣಮಾತ್ರ ನಿಷ್ಪಾದಿತ ಸಪ್ತತಳಾದಿ ಪ್ರಾಸಾದಪ್ರಕರಣನುಮಪ್ಪ ಭದ್ರಮುಖನೆಂಬ ತಕ್ಷಕರತ್ನಮುಂ: ಆದಿಪು, ೧೧. ೩ ವ)
ಸಪ್ತತಾಳೋತ್ತುಂಗ
[ಗು]ಏಳು ತಾಳೆಯ ಮರಗಳಷ್ಟು ಎತ್ತರವಾದ (ನವಕಿಸಲಯ ವಂದನಮಾಳಾಳಂಕೃತಮಪ್ಪ ಸಪ್ತತಾಳೋತ್ತುಂಗ ರಮ್ಯಹರ್ಮ್ಯದೆರಡನೆಯ ಮೊಗಸಾಲೆಯೊಳ್:ಪಂಪಭಾ, ೪. ೪೩ ವ)
ಸಪ್ತಧಾತು
[ನಾ]ಶರೀರದಲ್ಲಿನ ರಸ, ರಕ್ತ, ಮಾಂಸ, ಮೇದಸ್ಸು, ಮಜ್ಜೆ, ಅಸ್ಥಿ, ಶುಕ್ರಗಳೆಂಬ ಏಳು ಧಾತುಗಳು (ಆರಯೆ ಪುರೀಷಾಗಾರಂ ಸಂಪ್ರಾಪ್ತಸಪ್ತಧಾತುವಿಕಾರಂ:(ಆದಿಪು,೨. ೫೦)
ಸಪ್ತಪರಮಸ್ಥಾನ
[ನಾ][ಜೈನ] ಸಜ್ಜಾತಿತ್ವ, ಸದ್ಗೃಹತ್ವ, ಪಾರಿವ್ರಾಜ್ಯ, ಸುರೇಂದ್ರತ್ವÀ, ಸಾಮ್ರಾಜ್ಯ, ಅರ್ಹಂತ್ಯ, ನಿರ್ವಾಣ ಎಂಬ ಮೋಕ್ಷಪದವಿಯ ಏಳು ಹಂತಗಳು (ಸಜ್ಜಾತಿ ಸದ್ಗೃಹತ್ವ ಪಾರಿವ್ರಾಜ್ಯಪದ ಸುರೇಂದ್ರತ್ವ ಸಾಮ್ರಾಜ್ಯ ಪರಮಾರ್ಹಂತ್ಯ ಪರಿನಿರ್ವಾಣಮೆಂಬ ಏೞುಂ ಪರಮಸ್ಥಾನನಾಮ:ಆದಿಪು,೧೫. ೧೬ ವ)
ಸಪ್ತಭೂಮಿಕ
[ನಾ]ಏಳು ಉಪ್ಪರಿಗೆಗಳುಳ್ಳದ್ದು (ಮಾಣಿಕ್ಯಹರ್ಮ್ಯ ಆವಳೀವೃತಂ ಉದ್ಯೋತಿ ಸಪ್ತಭೂಮಿಕಂ ಅನೇಕ ಉದಗ್ರಕೂಟಂ .. .. ಚೆಲ್ವಾಯ್ತು ರಾಜಾಲಯಂ:ಆದಿಪು, ೬. ೧೦೭)
ಸಪ್ತರ್ಧಿ
[ನಾ][ಜೈನ] ಬುದ್ಧಿ, ತಪ, ವಿಕ್ರಿಯೆ, ಔಷಧಿ, ರಸ, ಬಲ ಮತ್ತು ಅಕ್ಷೀಣಗಳೆಂಬ ಏಳು ಋದ್ಧಿಗಳು (ಬುದ್ಧಿ ತಪೋವಿಕ್ರಿಯೌಷಧಿರಸಬಲಾಕ್ಷೀಣಾಭಿಧಾನ ಸಪ್ತರ್ಧಿಗಳೊಳಂ ನೆಱೆದು:ಆದಿಪು, ೬. ೩೩ ವ)
ಸಪ್ತವ್ಯಸನ
[ನಾ]ಏಳು ಚಟಗಳು: ಸ್ತ್ರೀ, ದ್ಯೂತ, ಬೇಟೆ, ಮದ್ಯಪಾನ, ವಾಕ್ಪಾರುಷ್ಯ, ದಂಡಪಾರುಷ್ಯ, ಅರ್ಥದೂಷಣ ಎಂಬ ಏಳು ವ್ಯಸನಗಳು (ದಾಯಿಗರಪ್ಪೊಡೆ ಕರಂ ಪೆರ್ಚಿದರ್ ಅವರ ಪೆರ್ಚಿಂಗೇಗೆಯ್ವಂ ಬಸನಂಗಳಂ ಸಮಕಟ್ಟುವಮಪ್ಪೊಡೆ ಸಪ್ತವ್ಯಸನಂಗಳ್ ಅಯ್ವರುಮನೊಂದುಂ ಗೆಲ್ವುವಲ್ಲವು:ಪಂಪಭಾ, ೬. ೬೭ ವ)
ಸಪ್ತಶತ
[ನಾ]ಏಳು ನೂರು (ಅನೇಕವರ್ಷಕೋಟ್ಯಂತರದೊಳ್ ಸಪ್ತಶತಶಿಳೀಮುಖಾಸನೋನ್ನತಾಪಘನನುಂ:ಆದಿಪು, ೬. ೫೭ ವ)
ಸಪ್ತಸಪ್ತಿ
[ನಾ]ಏಳು ಕುದುರೆಗಳನ್ನುಳ್ಳ ಸೂರ್ಯ (ನೆಲನಂ ನುಂಗವ ಮೇರುವಂ ಕೀೞ್ವ ಆಶಾಗಜೇಂದ್ರಂಗಳಂ ಚಲದಿಂ ಕಟ್ಟುವ ಸಪ್ತಸಪ್ತಿಯಂ ಇಳಾಭಾಗಕ್ಕೆ ತರ್ಪ:ಪಂಪಭಾ, ೭. ೭) [ಸೂರ್ಯನ ಏಳು ಕುದುರೆಗಳು: ಅಮೃತಸಂಭವ, ಬಾಷ್ಪಸಂಭವ, ವಹ್ನಿಸಂಭವ, ದೇವಸಂಭವ, ಅಂಡಸಮುದ್ಭವ, ಗರ್ಭಸಮುದ್ಭವ ಮತ್ತು ಸಾಮ್ನಾ ಎಂಬವು ಅಥವಾ ಛಂದೋರೂಪವಾದ ಗಾಯತ್ರೀ, ಬೃಹತೀ, ಉಷ್ಣಿಕ್, ಜಗತೀ, ತ್ರಿಷ್ಟುಪ್, ಅನುಷ್ಟುಪ್ ಮತ್ತು ಪಙ್ತಿ]
ಸಪ್ತಸಾಗರ
[ನಾ]ಲವಣ [ಉಪ್ಪು], ಇಕ್ಷÄ [ಕಬ್ಬಿನ ಹಾಲು], ಸುರಾ [ಮದ್ಯ], ಸರ್ಪಿಸ್ [ತುಪ್ಪ], ದಧಿ [ಮೊಸರು], ಕ್ಷೀರ [ಹಾಲು], ಜಲ [ನೀರು] ಎಂಬ ಏಳು ಪೌರಾಣಿಕ ಸಮುದ್ರಗಳು (ಕವಿದುವು ಸಪ್ತಸಾಗರಜಲಂಗಳೆ ಲೋಕಮನೀಗಳ್ ಎಂಬಿನಂ:ಪಂಪಭಾ, ೫. ೯೬)
ಸಪ್ತಾಂಗ
[ನಾ][ರಾಜ್ಯದ] ಏಳು ಅಂಗಗಳು: ಸ್ವಾಮಿ, ಅಮಾತ್ಯ, ಸುಹೃತ್, ಕೋಶ, ರಾಷ್ಟ್ರ, ದುರ್ಗ, ಬಲ ಅಥವಾ ಸ್ವಾಮಿ, ಅಮಾತ್ಯ, ಜನಪದ, ದುರ್ಗ, ಕೋಶ, ದಂಡÀ, ಮಿತ್ರ (ಸಪ್ತಾಂಗಮೀ ರಾಜಕಕ್ಕೆ ಅರಸಂ ಧರ್ಮಜನಕ್ಕುಂ ಎಂದು ನಯದಿಂ ನಿಶ್ಚೈಸಿ:ಪಂಪಭಾ, ೪. ೮)
ಸಪ್ತಾನೀಕ
[ನಾ]ಏಳು ಬಗೆಯ ಸೈನ್ಯ (ಹಸ್ತಿ ಅಶ್ವ ರಥ ಪದಾತಿ ವೃಷಭ ಗಂಧರ್ವ ನರ್ತಕೀಪ್ರಮುಖ ಸಪ್ತಾನೀಕಸಮೇತನುಂ:ಆದಿಪು, ೬. ೧೩ ವ)
ಸಪ್ತಾರ್ಚಿ
[ನಾ]ಹಿರಣ್ಯ, ಕನಕಾ, ರಕ್ತಾ, ಕೃಷ್ಣಾ, ಸುಪ್ರಭಾ, ಬಹುರೂಪಾ ಮತ್ತು ಅತಿರಕ್ಷಾ ಎಂಬ ಏಳು ನಾಲಗೆಗಳ ಹೋಮಾಗ್ನಿ (ಕನಕಗಿರಿಯಂ ಬಲಗೊಳ್ವ ಪತಂಗದಂಪತಿಯಂತೆ ಆ ದಂಪತಿಗಳ್ ಸಪ್ತಾರ್ಚಿಯಂ ಮೂಱು ಸೂೞ್ ಬಲವಂದು:ಪಂಪಭಾ, ೩. ೭೫ ವ)
ಸಂಪ್ರೀತಿ
[ನಾ] ಕಟ್ಟೊಲವು, ಬಹು ಪ್ರೀತಿ (ಆತಂಗೆ ಅರಿಕೇಸರಿ ಸಂಪ್ರೀತಿಯೆ ಬೞಿಯಟ್ಟಿ ಪಿರಿದನಿತ್ತು: ಪಂಪಭಾ, ೧೪. ೫೧)
ಸಂಪ್ಲುಷ್ಟ
[ಗು]ಪೂರ್ತಿ ಸುಟ್ಟುಹೋದ, ಕರಿಕಾದ (ಕಷ್ಟಂ ದುಃಖಾನಳಸಂಪ್ಲುಷ್ಟಂ ಚಿಃ ಗತಿಚತುಷ್ಟಯಂ ಪ್ರಾಣಿಗೆ:ಆದಿಪು, ೯. ೫೧) [ವೆಂಕಟಾಚಲಶಾಸ್ತ್ರಿಗಳ ಆವೃತ್ತಿ]
ಸಬ
[ನಾ][ಶವ] ಹೆಣ(ಅದಟರ ಚೆನ್ನಪೊಂಗರ ಸಬಂಗಳ ತೊೞ್ತುೞಿಯೊಳ್ ತೊಡಂಕಿ ನಿಲ್ಲದೆ ಪೊಱಮಟ್ಟ ತಮ್ಮ ಮನದೊಳ್ ಮಿಗೆ ಬೆಚ್ಚಿಸಿದಂತೆ ತೋಱುವ:ಪಂಪಭಾ, ೮. ೧೦೪)
ಸಂಬಳಂಗೊಳ್