भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous1234567894748Next >

ಸ ಸರ್ವಜಗತಾಂ ಗುರುರ್ಗಿರಿಸುತಾಪತಿಃ ಪಾತು ನಃ

ಸಮಸ್ತ ಜಗತ್ತಿಗೂ ಒಡೆಯನೂ ಗುರುವೂ ಪಾರ್ವತೀಪತಿಯೂ ಶಿವನೂ ಆದ ಅವನು ನಮ್ಮನ್ನು ಕಾಪಾಡಲಿ (ಪಂಪಭಾ, ೪. ೨೭)

ಸಂಕಟ

[ನಾ] [ಸಂಕಷ್ಟ] ಇಕ್ಕಟ್ಟಾದ, ದುರ್ಗಮವಾದ (ಜಾನುಭಂಜನೀ ಶೂಲಪ್ರಕರ ಪರಿವೃತಂಗಳುಂ ಕೂಪಕೂಟಾವಪಾತ ಲೋಹ ಕಂಟಕ ಸಂಕಟಂಗಳುಂ .. .. ಅಪ್ಪ ದುರ್ಗಂಗಳೊಳ್: ಆದಿಪು, ೧೩. ೫೭ ವ); [ನಾ] ವ್ಯಥೆ (ನಲ್ಲರಗಲ್ಕೆಗೆ ಕಣ್ಣ ನೀರ್ಗಳಂ ಮಿಡಿವ ಬಹುಪ್ರಕಾರಸಂಕಟಮೊಪ್ಪಿದುದಾ ಪ್ರಯಾಣದೊಳ್: ಆದಿಪು, ೪. ೫೭); ತೊಂದರೆ (ಒರ್ವರಂ ಒರ್ವರ್ ಎಚ್ಚು ನಿಜಪೀಠಾಂಭೋಜದಿಂ ಬ್ರಹ್ಮನುಚ್ಚಳಿಪನ್ನಂ ಪಿರಿದೊಂದು ಸಂಕಟಮನೀ ತ್ರೈಲೋಕ್ಯದೊಳ್ ಮಾಡಿದರ್: ಪಂಪಭಾ, ೧. ೭೯)

ಸಂಕರ

[ನಾ] ಮಿಶ್ರಣ (ಎರೞ್ತಡಿಯ ಪೂಮರದಿಂ ಕೞಿವೂಗಳತ್ತಮಿತ್ತ ಕವಿದಲ್ಲಿ ಮೆಲ್ಲನುಗೆ ತೆಂಕುವ ಪೂವಿನ ಸಂಕರಂಗಳಂ: ಆದಿಪು, ೧. ೬೧); [ನಾ] ಶಂಕರ, ಶಿವ (ಅಣ್ಣನೊಂದು ಮಾತಂ ಅಣಂ ಮೀಱದೆ ನಿಂದು ಸಂಕರನ ನೀನಾರಾಧಿಸು ಎಂದು ಇಂತಿದಂ ಮುನಿ ಪರಾಶರಂ ಒಲ್ದು ಪೇೞೆ: ಪಂಪಭಾ, ೮. ೫)

ಸಂಕರ್ಷಣ

[ನಾ] ಬಲರಾಮ (ಎಂಬುದುಂ ಸಂಕರ್ಷಣಂ ಆತನ ಮನದ ಉತ್ಕರ್ಷತೆಯನಱಿದು ಪೆಱತಂ ಇನ್ನೆನಗೆ ನುಡಿಯಲೆಡೆಯಿಲ್ಲ: ಪಂಪಭಾ, ೧೩. ೯೦ ವ)

ಸಂಕಲೆ

[ನಾ] [ಶೃಂಖಲಾ] ಸಂಕೋಲೆ (ಓಪನಂ ಮಿಡುಕಲೀಯದೆ ಕಾಲ್ವಿಡಿದೞ್ತು ತೋರ ಕಣ್ಬನಿಗಳನಿಕ್ಕಿದಳ್ ತರಳಲೋಚನೆ ಸಂಕಲೆಯಿಕ್ಕಿದಂತೆವೋಲ್: ಪಂಪಭಾ, ೪. ೯೭)

ಸಂಕಲ್ಪ

[ಗು] ಕಲ್ಪಿಸಿಕೊಂಡ, ಕಲ್ಪನೆಯ (ಎಂದು ತನ್ನೊಳೆ ಬಗೆದು ಸಂಕಲ್ಪಸಮಾಗಮಸುಖಮನನುಭವಿಸಿ: ಆದಿಪು, ೪. ೧೪ ವ); [ನಾ] ವಿದ್ಯೆ [ಶರಕಲ್ಪ] (ಶರಸಂಧಾನ ಆಕರ್ಷಣ ಹರಣಾದಿ ವಿಶೇಷವಿವಿಧಸಂಕಲ್ಪಕಳಾಪರಿಣತಿಯಂ ಮೆಱೆದುದು: ಪಂಪಭಾ, ೧೨. ೧೮೬)

ಸಕಳಕಳಾಧರ

[ನಾ]ಎಲ್ಲ ಕಲೆಗಳನ್ನುಳ್ಳ, ಪೌರ್ಣಮಿಯ ಚಂದ್ರ (ಪಲಂಬರ್ ರಾಜಕುಮಾರರ ನಡುವೆ ತಾರಾಗಣಂಗಳ ನಡುವಣ ಸಕಳಕಳಾಧರನಂತೆ ಶಸ್ತ್ರಕಲಾಧರನಾಗಿ:ಪಂಪಭಾ, ೨. ೫೯ ವ)

ಸಕಳದತ್ತಿ

[ನಾ][ಜೈನ] ವಂಶದ ಎಲ್ಲವನ್ನೂ ಮಗನಿಗೆ ಕೊಡುವುದು (ನಿಜಾನ್ವಯೋದ್ಧರಣಸಮರ್ಥನಪ್ಪ ಅಗ್ರತನೂಭವಂಗೆ ಆತ್ಮೀಯ ಧರ್ಮ ಧನ ಬಂಧುಗಳಂ ಸಮರ್ಪಿಪ ಸಕಳದತ್ತಿಯುಂ:ಆದಿಪು, ೧೫. ೧೩ ವ)

ಸಕಳರ್ತುಕರಾಜ

[ನಾ]ಎಲ್ಲ ಋತುಗಳಿಗೂ ರಾಜ, ಋತುರಾಜ (ಭರತರಾಜಂ ಸಕಳರ್ತುಕರಾಜನಪ್ಪ ಮನೋಜರಾಜಂಗೆ ಮಾಡಿದುದೆನಿಸುವ ವಿರಾಜಮಾನ ರಕ್ತಾಶೋಕಪಲ್ಲವ ಕಾಯಮಾನದೊಳ್:ಆದಿಪು, ೧೧. ೭೪ ವ)

ಸಕಳವಟ್ಟೆ

[ನಾ]ತುಂಡು ಬಟ್ಟೆಯ ಪಟ್ಟಿಗಳು (ಸಕಳವಟ್ಟೆಗಳುಮಂ ಮೆಟ್ಟುವೆಡೆಗಳೊಳೆಲ್ಲಂ ಪಾಸಿ:ಆದಿಪು, ೪. ೩೪ ವ);[ನಾ]ಬಣ್ಣಬಣ್ಣದ ಬಟ್ಟೆ (ದೆಸೆದೆಸೆಗೆ ಕೆದಱಿದ ಕೆಂಡದಿಂಡೆಗಳುಂ ನಾರಂಗ ಸಕಳವಟ್ಟೆಯ ಪೞಯಿಗೆಗಳಂತೆ ನಭಕ್ಕೆ ಮಿಳಿರ್ದು:ಪಂಪಭಾ, ೧೧. ೧೪೦ ವ)

ಸಕಳಾರ್ಥಸಂಯುತ

[ಗು]ಎಲ್ಲ ಅರ್ಥಗಳಿಂದ ಕೂಡಿದ (ಆ ಸಕಳಾರ್ಥಸಂಯುತ ಅಳಂಕೃತಯುಕ್ತಂ ಉದಾತ್ತ ವೃತ್ತಿ ವಿನ್ಯಾಸಂ ಅನೇಕ ಲಕ್ಷಣ ಗುಣ ಪ್ರಭವಂ:ಪಂಪಭಾ,೧. ೯)

ಸಂಕಾಶ

[ನಾ]ಹೋಲಿಕೆ, ಸದೃಶ (ಮತ್ತಮದೊಂದಿನಿಸು ಬೇಗದಿಂ ಮೃದುಮೃಣಾಳ ಸಂಕಾಶಮಾಯ್ತು:ಆದಿಪು, ೧೨. ೭);[ನಾ]ಸಮಾನವಾದ (ಧವಳಹಯಂ ಧವಳರಥಂ ಧವಳ ಉಷ್ಣೀಷಂ ಶಶಾಂಕಸಂಕಾಶ ಯಶೋಧವಳಿತ ಭುವನಂ ತಾಗಿದಂ ಅವಯವದಿಂ ಬಂದು ಧರ್ಮತನಯನ ಬಲದೊಳ್:ಪಂಪಭಾ, ೧೧. ೩೯)

ಸಂಕೀರ್ಣ

[ಗು] ತುಂಬಿಕೊಂಡ (ಅನೇಕ ಕರಿ ತುರಗ ನರ ಕಳೇವರ ಸಂಕೀರ್ಣಮುಂ ಉಭಯಪಕ್ಷಸ್ಥಿತ ಉಭಯಕುಲಶುದ್ಧ ನೃಪತಿಮಣಿಮಕುಟಮರೀಚಿ ಮೇಚಕಿತಮುಂ: ಪಂಪಭಾ, ೧೩. ೫೫ ವ)

ಸಂಕೀರ್ಣಂಗಳಾಗು

[ಕ್ರಿ] ದಟ್ಟವಾಗು, ಗಾಢವಾಗು (ಆದ ವಿನೋದಂಗಳ್ ಅನಂಗರಾಗರಸ ಸಂಕೀರ್ಣಂಗಳಾದಂದು ಆಱುವ ಪಾಂಗಾವುದು: ಆದಿಪು, ೧೨. ೨೧)

ಸಂಕು

[ನಾ][ಶಂಕು] ಕಠಾರಿ (ನಡುವ ಸರಲ್ಗೆ ಮೆಯ್ಯೊಳ್ ಅಡಂಗುವ ಸಂಕುಗೆ ದಿಂಕುಗೊಳ್ವ ಕಕ್ಕಡೆಗೆ ಇದಿರ್ ಉರ್ಚುವ ಇಟ್ಟಿಗೆ .. ..ಪಂಪಭಾ, ೧೦. ೯೪)

ಸಂಕುಲ

[ನಾ]ಸಮೂಹ(ಸುರ ದನುಜ ಭುಜಗ ವಿದ್ಯಾಧರ ನರ ಸಂಕುಲದೊಳ್ ಆರನಾದೊಡಂ ಏನೋ ಗರಮುಟ್ಟೆ ಕೊಲ್ಗುಂ ಇದು ನಿಜವಿರೋಧಿಯಂ ಧುರದೊಳ್ ಎಂದು ಶಕ್ತಿಯನಿತ್ತಂ:ಪಂಪಭಾ, ೧. ೧೦೩)

ಸಂಕೆ

[ನಾ][ಶಂಕೆ] ಅಂಜಿಕೆ (ಪದ್ಮರಾಗದ ಪೊಸಗೆಂಪಂ ಮಾಂಸಮೆಂದು ಮುಂ ಕರ್ದುಕಲ್ಕಾಟಸಿಯುಂ ಬೞಿಕದನುರಿಯೆಂಬ ಸಂಕೆಯಿಂ ಪೊರ್ದದಿರ್ದುವೀ ಮತ್ಸ್ಯಂಗಳ್:ಆದಿಪು, ೧೨. ೧೨೨)

ಸಂಕೆಯಂ ಕಿಡಿಸು

[ಕ್ರಿ]ಭಯವನ್ನು ಹೋಗಲಾಡಿಸು (ಎಂದು ಮುನ್ನಮೆ ಮುಟ್ಟಿ ನುಡಿಯದೆ ಪೊಱಪೊಱಗನೆ ಬಳಸಿ ಕನ್ನೆಯ ಸಂಕೆಯಂ ಕಿಡಿಸಿ:ಪಂಪಭಾ, ೪. ೬೩ ವ)

ಸಂಕೇತ

[ನಾ] ಗುರುತಿಸುವುದು, ಪ್ರಶಂಸಿಸುವುದು (ದುರ್ಲಲಿತ ಚರಿತ ಸಂಕೇತಗೋಷ್ಠೀನಿಕೇತಂ: ಆದಿಪು, ೧೪ ೧೯); ಸೂಚನೆ (ದುರ್ಯೋಧನನ ಸಂಕೇತದೊಳ್ ಮುನ್ನಮೆ ಸಮೆದಿರ್ದ ಪುರೋಚನಂ: ಪಂಪಭಾ, ೩. ೨ ವ)

ಸಂಕೇತನಿಕೇತನ

[ನಾ]ಸಂಕೇತಸ್ಥಾನ, ಕೂಡುವ ಜಾಗ (ನೀನೀ ವಿರಾಟನ ನಾಟಕಶಾಲೆಯನೆ ಸಂಕೇತನಿಕೇತನಂ ಮಾಡಿ ನೇಸರ್ಪಡಲೊಡಂ ಎನ್ನಿಂ ಮುನ್ನಮೆ ಪೋಗಿರ್ಪುದು:ಪಂಪಭಾ, ೮. ೭೨ ವ)
< previous1234567894748Next >

Search Dictionaries

Loading Results

Follow Us :   
  Download Bharatavani App
  Bharatavani Windows App