Pampana Nudigani (Kannada)
Kamadhenu Pustaka Bhavana
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಹರಿಗ
[ನಾ]‘ಪಂಪಭಾರತ’ ದಲ್ಲಿನ ಅರ್ಜುನ (ಭಾರತಂ ಕಲಹಂ ಇದಿರ್ಚುವಂ ಹರಿಗಂ ಅಪ್ಪೊಡೆ ಮೊಕ್ಕಳಮೇಕೆ ನೀಂ ಪಳಂಚಲೆದಪೆಯಣ್ಣ:ಪಂಪಭಾ,೧೦. ೨೩)
ಹರಿಚಂದನ
[ನಾ]ಶ್ರೀಗಂಧ (ಸರಳ ತಮಾಳ ತಾಳ ಹರಿಚಂದನ ನಂದನ ಭೂಜರಾಜಿಯಿಂ ಸುರಿವ ಅಲರೋಳಿ ತದ್ವನಲತಾಂಗಿಯ ಸೂಸುವ ಸೇಸೆಯಾಯ್ತು:ಪಂಪಭಾ, ೫. ೫೨)
ಹರಿಣ
[ನಾ]ಜಿಂಕೆ (ಉದಯಗಿರಿ ಕಟಕ ಕುಹರ ಪರಿಕರ ನಿಶಾಕರಂ ಹರಿದಳಿತ ನಿಜ ಹರಿಣ ರುಧಿರನಿಚಯ ನಿಚಿತಮಾದಂತೆ ಲೋಹಿತಾಂಗನಾಗೆ:ಪಂಪಭಾ, ೪. ೪೯ ವ)
ಹರಿಣಿ
[ನಾ]ಹೆಣ್ಣು ಜಿಂಕೆ (ನಿಮಿರ್ವ ಸುಯ್ಗಳಿಂ ಕುಸಿಯುತ್ತುಂ ಶರಪಾಶಂಗಳ ನಡುವಣ ಹರಿಣಿಯವೋಲ್ ಮನದೊಳಾಗಳ್ ಆಕುಳೆಯಾದಳ್:ಆದಿಪು, ೪. ೫೦)
ಹರಿತಾಂಕುರ
[ನಾ]ಎಳೆಯ ಗರಿಕೆ, ಹಸಿರು ಮೊಳಕೆ (ಹರಿತಾಂಕುರ ಫಳಪುಷ್ಪೋತ್ಕರಂಗಳಂ ಪೊಸತೆ ಮೊಳೆತ ಧನ್ಯಂಗಳಂ ಧಾನ್ಯಂಗಳಂ ಆ ಧರಣೀಶಂ ಕೆದಱಿಸಿದಂ ರಾಜಗೇಹದೊಳಗಂ ಪೊಱಗಂ:ಆದಿಪು, ೧೫. ೭)
ಹರಿತಾಳಪಂಕ
[ನಾ]ಅರಿದಾಳದ ಗಂಧ (ಹರಿತಾಳಪಂಕ ಪಿಂಗಳ ವಿಲಂಘಿತ ಶಿಲಾಸ್ತಂಭ ವಿಭ್ರಮಭ್ರಮರಮಾನಿತಂಬ ಶಿಖರಿತರಂಗಿತÀ:ಆದಿಪು, ೧೩. ೪೫ ವ)
ಹರಿದ್ರ
[ನಾ]ಅರಿಸಿನ (ಸರ್ವಾಂಗೀಣ ಸಾಂದ್ರ ಹರಿದ್ರಲಿಪೇನವಿಲಿಪ್ತ ಹರಿತಾಳಪಂಕಪಿಂಗಳವಿಲಂಘಿತ:ಆದಿಪು, ೧೩. ೪೫ ವ)
ಹರಿನಖಾಂಕುರ
[ನಾ]ಸಿಂಹದ ಪಂಜ (ಕೊರಲೊಳ್ ಶಾರ್ದೂಲ ನಖಾಂಕುರಂಗಳುಂ ಹರಿನಖಾಂಕುರಂಗಳುಂ ಅಂದೇಂ ಕರಮೆಸೆದಿರ್ದುವೊ ಶೌರ್ಯಾಂಕುರಂಗಳೆಂಬಿನಂ ಆದಿದೇವಾತ್ಮಜನಾ:ಆದಿಪು, ೮. ೪೦)
ಹರಿನೀಲಮಣಿ
[ನಾ]ಹಸಿರು-ನೀಲಿಯ ಮಣಿ (ಶಾಳೀ ಹರಿನೀಲಮಣಿಕಿರಣಾಳಿ ಪೊದಳ್ದೆಸೆಯೆ ರಾಹುಗೆತ್ತು:ಆದಿಪು, ೬. ೧೦೫)
ಹರಿನ್ಮಣಿ
[ನಾ][ಹರಿತ್+ಮಣಿ] ಪಚ್ಚೆ (ಹರಿನ್ಮಣಿವರ್ಣನಂ ನೆರೆದುದಿದು ಮೇಣ್ ಕ್ಷಾತ್ರಂ ತೇಜಂ ಧರಾಧಿಪರೂಪದಿಂ ಧರೆಗೆ:ಆದಿಪು, ೧೪. ೪೪)
ಹರಿಪೀಠ
[ನಾ]ಸಿಂಹಾಸನ (ಇರೆ ಹರಿಪೀಠದೊಳ್ ಭರತಂ ಆದರದಿಂ ಬೆಸಗೊಂಡುದಂ ಜಿನೇಶ್ವರಮತದಿಂದಂ ಆ ವೃಷಭಸೇನಗಣಾಗ್ರಣಿ ಪೇೞ್ದುದಂ:ಆದಿಪು, ೧. ೪೧)
ಹರಿಪೋತ
[ನಾ]ಸಿಂಹದ ಮರಿ(ಹರಿಪೋತಮಂ ಬೆದಱುತುಂ ಕರಿಪೋತಂ ಅವುಂಡುಗರ್ಚಿ ಕೇಸರಿಣಿಯಂ ಕೆಚ್ಚಲಂ ತುಡುಕುತಂ ಪರಿದತ್ತು:ಪಂಪಭಾ, ೭. ೮೦)
ಹರಿಹರಹಿರಣ್ಯಗರ್ಭ
[ನಾ] ವಿಷ್ಣುಶಿವಬ್ರಹ್ಮರು (ಕಿಡುಗುಮೆ ರಾಜ್ಯಂ ರಾಜ್ಯದ ತೊಡರ್ಪದೇವಾೞ್ತೆ ನನ್ನಿಯ ನುಡಿಯಂ ಕಿಡೆ ನೆಗೞೆ ನಾನುಮೆರಡಂ ನುಡಿದೊಡೆ ಹರಿಹರಹಿರಣ್ಯಗರ್ಭರ್ ನಗರೇ: ಪಂಪಭಾ, ೧. ೮೨)
ಹಲ
[ನಾ]ನೇಗಿಲು (ಶತಸಹಸ್ರಕೋಟಿ ಹಲಂಗಳುಂ ಮೂಱುಕೋಟಿ ಗೋಮಂಡಲಂಗಳುಂ:ಆದಿಪು, ೧೫. ೩ ವ)
ಹವ್ಯಾಮೃತ
[ನಾ]ಹವಿಸ್ಸು ಎಂಬ ಅಮೃತ (ಆ ಬ್ರಾಹ್ಮಣಸಮಿತಿ ಬೇಳೆ ದೇವರ್ ತಣಿಯುಂಡರ್ ನೆರೆದು ದಿವ್ಯ ಹವ್ಯಾಮೃತಮಂ:ಪಂಪಭಾ, ೬. ೩೭)
ಹಂಸಕುಳ
[ನಾ] ಹಂಸಪಕ್ಷಿಗಳ ಗುಂಪು (ಓಲಗಕ್ಕೆ ಪುಗುವ ಪೊಱಮಡುವ ವಾರವಿಳಾಸಿನಿಯರ ನೂಪುರಂಗಳ ರವಂಗಳೊಳ್ ನೃಪಭವನೋಪವನ ದೀರ್ಘಿಕಾ ಹಂಸಕುಳಂಗಳ್ ತಳವೆಳಗಾದುವು: ಪಂಪಭಾ, ೪. ೪೯ ವ)
ಹಂಸಗತಿ
[ನಾ]ಹಂಸದಂತಹ ಮೆಲುವಾದ ನಡಿಗೆ(ಮಂಗಳಧಾರಿಣಿಯರಾಗಿ ಮುಂದಂ ನಡೆವ ಆಶಾಂಗನೆಯರಿಂದೆ ದಿವಿಜೇಂದ್ರಾಂಗನೆ ಕರಮೆಸೆದು ಹಂಸಗತಿಯೊಳ್ ಬಂದಳ್:ಆದಿಪು, ೭. ೪೮)
ಹಂಸಗ್ರೀವ
[ನಾ]ಹಂಸದ ಕೊರಳು(ಹಂಸಗ್ರೀವನಿಹಿತ ಏಕಪಾದಂ ಇಳಾವಂದ್ಯಂ ಅನಿಂದ್ಯಂ ಅಬ್ಜಗರ್ಭಂ ಬಂದಂ:ಪಂಪಭಾ, ೧೨. ೧೩೮)
ಹಂಸಗ್ರೀವನಿಹಿತ ಏಕಪಾದಂ
ಹಂಸಪಕ್ಷಿಯಲ್ಲಿ ಇಟ್ಟ ಒಂದು ಪಾದವುಳ್ಳವನು (ಹಂಸಗ್ರೀವನಿಹಿತ ಏಕಪಾದಂ ಇಳಾವಂದ್ಯಂ ಅನಿಂದ್ಯಂ ಅಬ್ಜಗರ್ಭಂ ಬಂದಂ:ಪಂಪಭಾ, ೧೨. ೧೩೮)
ಹಂಸಧವಳ