भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಹಂಸವೃದ್ಧ

[ನಾ]ಮುದಿ ಹಂಸ (ಹಂಸವೃದ್ಧನಂ ಇನಿಸಂ ನೆನೆಯಿಸಿ ಕೊಳದೊಳಗಣ ಸಿತವನರುಹಲಕ್ಷ್ಮಿಯುಮನಿನಿಸುಂ ತನಗೊಳಕೊಂಡಂ:ಆದಿಪು, ೭. ೯೯)

ಹಸಿತ

[ಕ್ರಿ] ನಗುವ (ಪ್ರವಾಹ ಅತ್ಯುಷ್ಮತಾಪಹಸಿತ ಪ್ರಳಯಕಾಲ ಪ್ರೌಢತರತರಣಿಯಂ ವೈತರಣಿಯಂ ಪೊಕ್ಕಾಗಳ್: ಆದಿಪು, ೫. ೮೭ ವ)

ಹಸ್ತ

[ನಾ] ಸೊಂಡಿಲು (ಸಲಿಲಕ್ರೀಡಾಭವೋದ್ಯತ್ ಜಳಕಣನಿಕರಾಕಾರ ಮತ್ತದ್ವಿಪೇಂದ್ರಾವಳಿ ಹಸ್ತಾಗ್ರೋಚ್ಚಳತ್ ಶೀಕರಸಮುದಯಂ: ಆದಿಪು, ೧೩. ೮)

ಹಸ್ತಕಟಕ

[ನಾ]ಕೈಕಡಗ, ಹಗುರ ಎಂಬ ಆಶಯ (ನಿಜಾನ್ವವಾಯ ಭೂಭರಮನದೊಂದು ಹಸ್ತಕಟಕೋಪಮಂ ಎಂಬಿನಿತಾಗೆ ತಾಳ್ದಿಕೊಂಡಿರೆ:ಆದಿಪು, ೩. ೭೮)

ಹಸ್ತಕೌಶಲಕಳಿತ

[ನಾ]ಕೈಗಳು ನಿಪುಣತೆಯಿಂದ ಮಾಡಬಹುದಾದುದು (ಹಸ್ತಕೌಶಲಕಳಿತಮಪ್ಪ ಚಿತ್ರಕಳಾಪ ಪರಿಚ್ಛೇದ್ಯಾದಿ ಸಮನ್ವಿತಮಪ್ಪ ಶಿಲ್ಪಮುಮಂ:ಆದಿಪು, ೮. ೬೪ ವ)

ಹಸ್ತನ್ಯಸ್ತ

ಕೈಗೊಪ್ಪಿಸಿದ(ದಂಡನಾಯಕಂ ತೋಱಿದನೇಕ ಕ್ಷತ್ರಿಯಪುತ್ರಕುಲಧನಂಗಳಂ ಕೈಕೊಂಡು ಕೋಶಾಧ್ಯಕ್ಷ ಹಸ್ತನ್ಯಸ್ತಂಗಳ್ಮಾಡಿ:ಆದಿಪು, ೧೩. ೮೦ ವ)

ಹಸ್ತಸ್ವಸ್ತಿಕ

[ನಾ]ಅಡ್ಡಡ್ಡಲಾಗಿ ಕೈಗಳನ್ನಿಡುವುದು (ಉತ್ತರಯಾಂತರೀಯಂ ಕೊನೆಯೆ ತೊಲಗಿ ನಿಂದಿರ್ದಲ್ಲಿ ತಂದಿತ್ತುದುಚ್ಚಸ್ತನದೊಳಮರ್ದ ಹಸ್ತಸ್ವಸ್ತಿಕಂಗಳ್ ಬೆಡಂಗಂ:ಆದಿಪು,೧೧. ೧೪೮)

ಹಸ್ತಾವಲಂಬ

[ನಾ]ಕೈ ಆಸರೆ (ಮಂಗಳಾಳಮಕರಣಾಲಂಕೃತಂ ಸೌಧರ್ಮೇಂದ್ರದತ್ತ ಹಸ್ತಾವಲಂಬನಾರೂಢ ಶುಭಪರಿಣಾಮಂ .. .. ಶಿಬಿಕೆಯನೇಱಿದಾಗಳ್:ಆದಿಪು,೯. ೭೨)

ಹಸ್ತಿ

[ನಾ]ಸೊಂಡಿಲಿರುವ, ಆನೆ (ಹಸ್ತಿಯ ಬೆಂಗೆ ವಂದು ಸುತ್ತಿಱಿದು ಪಗಲಂ ತಡವಿಕ್ಕಿದಂತೆ ಬೆಳಗುವ ಕೆಯ್ದೀವಿಗೆಗಳ ಬೆಳಗೆ ಬೆಳಗಾಗೆ:ಪಂಪಭಾ, ೧೨. ೫೨ ವ)

ಹಸ್ತಿರದ

[ನಾ]ಆನೆಯ ದಂತ (ಹಸ್ತಿರದ ಹಸ್ತಿಮಸ್ತಕೋದ್ಭವ ಮುಕ್ತಾವಿಸ್ತಾರಮೆಂದು ತಂದು ಸಮಸ್ತವನಾಧೀಶರ್ ಅವನಿಪತಿಯಂ ಕಂಡರ್:ಆದಿಪು,೧೨. ೬೭)

ಹಸ್ತಿಶಾಸ್ತ್ರ

[ನಾ]ಗಜಶಾಸ್ತ್ರ, ಆನೆಗಳ ಬಗೆಗಿನ ತಿಳಿವಳಿಕೆ (ಗಜಾಗಮಜ್ಞ ರಾಜಪುತ್ರ ಗೌತಮ ವಾದ್ವಾಕಿ ಪಾಳಕಾಪ್ಯ ಸುಪತಿ ಶ್ರೀಹರ್ಷಾದಿ ಪುರಾಣಪುರುಷ ವಿರಚಿತಂಗಳಪ್ಪ ಹಸ್ತಿಶಾಸ್ತ್ರಂಗಳೊಳಂ:ಪಂಪಭಾ,೨. ೩೪ ವ)

ಹಸ್ತ್ಯಶ್ವತಂತ್ರ

[ನಾ][ಹಸ್ತಿ+ಅಶ್ವತಂತ್ರ] ಆನೆ ಕುದುರೆಗಳ ಬಗೆಗಿನ ಶಾಸ್ತ್ರಗಳು (ಬಾಹುಬಲಿಗೆ ಕಾಮತಂತ್ರ ಸಾಮುದ್ರಿಕ ಆಯುರ್ವೇದ ಧನರ್ವೇದ ಹಸ್ತ್ಯಶ್ವತಂತ್ರ ರತ್ನಪರೀಕ್ಷೆಗಳುಮಂ .. .. ಉಪದೇಶಂಗೆಯ್ದಂ:ಆದಿಪು, ೮. ೬೦)

ಹಳ

[ನಾ][ಹಲ] ನೇಗಿಲು (ಅರಿನೃಪಾಲಮೌಳಿಮಣಿಯೊಳ್ ನೆಲೆಗೊಂಡುದು ಶಂಖಚಕ್ರಚಾಮರಹಳಚಿಹ್ನಿತಪದಾಕೃತಿ:ಪಂಪಭಾ, ೬. ೨೯)

ಹಳಿ

[ನಾ]ಬಲರಾಮ (ಇಂದೆ ಹಳಿಯುಂ ಗಡ ಕೂಡುವಂ ಆತನಂ ಗೆಲಲ್ ಬಂದಪುದೇ ಬೞಿಕ್ಕ ಅದುವೆ ಕಾರಣಮಾಗಿ ಉಳಿದಿರ್ದಂ ಅಂಧರಾಣ್ನಂದನಂ:ಪಂಪಭಾ,೧೩. ೭೫)

ಹಾಟಕಕೂಟ

[ನಾ]ಚಿನ್ನದ ಶಿಖರ (ಪೊೞಲಂ ಪೊಱಮಟ್ಟು ಅನೇಕ ಹಾಟಕಕೂಟಕೋಟಿಘಟಿತ ಸಿದ್ಧಕೂಟಮಂ ತ್ರಿಃಪ್ರದಕ್ಷಿಣಂಗೈದು:ಆದಿಪು, ೨. ೫೦ ವ)

ಹಾಟಕಘಟಿತ

[ಗು]ಚಿನ್ನದಿಂದ ಮಾಡಿದ (ಸುರತರುಪ್ರಸೂನ ಕರ್ಪೂರಪಾಂಸು ಗೋಶೀರ್ಷ ಚಂದನದ್ರವ ಪರಿಮಳ ಸುಗಂಧಿಜಲಸಂಭೃತ ಹಾಟಕಘಟಿತಘಟ ಕೋಟಿಗಳನೆತ್ತಿಕೊಂಡು:ಆದಿಪು, ೭. ೧೦೧ ವ)

ಹಾಟಕಪದಕ

[ನಾ]ಚಿನ್ನದ ಪದಕ (ಸುವರ್ಣಮಣಿಬದ್ಧ ಉದ್ಧುರಕಂಧರಂ ಉತ್ಕಟ ಹಾಟಕಪದಕಮಣಿ ತ್ರಿಖಂಡಕರ್ಣಾಭರಣಂ:ಆದಿಪು, ೧೩. ೪೫ ವ)

ಹಾಟಕಪೀಠ

[ನಾ]ಚಿನ್ನದ ಪೀಠ, ಮಣೆ (ವಿವಾಹಮಂಟಪದ ನಡುವಣ ಮಣಿಮಯ ವೇದಿಕೆಯ ಹಾಟಕಪೀಠದ ಮೇಲೆ ಪಾಸಿದ ದುಗುಲದ ದಳಿಂಬದೊಳ್ ಇರಿಸಿದಾಗಳ್:ಆದಿಪು, ೪. ೪೭ ವ)

ಹಾಟಕಭಿತ್ತಿ

[ನಾ]ಚಿನ್ನದ ಗೋಡೆ(ಹಾಟಕಭಿತ್ತಿಸಮನ್ವಿತ ನಾಟಕಶಾಲೆಗಳ ವಿವಿಧಸೌಧಂಗಳ ಕೊಂಡಾಟಮನೆ ಮೆಱೆದು ಮೆಚ್ಚಂ ಪಾಟಿಸುವುವು ಮಿಥುನತತಿಗೆ ಗೃಹಮಹಿಜಾತಂ:ಆದಿಪು, ೫. ೩೭)

ಹಾಮಾಧಿಕ್ಕಾರದಂಡ

[ನಾ] ಹಾ ಮಾ ಧಿಕ್ಕಾರ ಮತ್ತು ದಂಡ ಎಂಬ ನಾಲ್ಕು ಬಗೆಯ ದಂಡನೆಗಳು (ಈ ಮಾೞ್ಕೆಯೊಳೆಸಗದರಂ ಹಾ ಮಾ ಧಿಕ್ಕಾರದಂಡದಿಂ ದಂಡಿಪುದು: ಆದಿಪು, ೮. ೭೪)

Search Dictionaries

Loading Results

Follow Us :   
  Download Bharatavani App
  Bharatavani Windows App