Pampana Nudigani (Kannada)
Kamadhenu Pustaka Bhavana
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಹಾಯೆನ್ನು
[ಕ್ರಿ][ಹಾ+ಎನ್ನು] ಪ್ರತಿಕ್ರಿಯಿಸು (ಬಾಯೞಿದು ಎನಿತು ಎರೆದೊಡಂ ಆ ಹಾ ಎನ್ನೆಯ:ಪಂಪಭಾ, ೮. ೬೯)
ಹಾರ
[ನಾ]ನೂರೆಂಟು ಎಳೆಗಳ ಮಾಲೆ (ವಿಜಯಚ್ಛಂದ ಹಾರ ದೇವಚ್ಛಂದ ಅರ್ಧಹಾರ ರಶ್ಮಿಕಲಾಫಗುಚ್ಛ ನಕ್ಷತ್ರಮಾಳಾ ಅರ್ಧಗುಚ್ಛ:ಆದಿಪು, ೮. ೫೪ ವ);[ನಾ]ಮನೋಹರವಾದ (ಸಮಸ್ತವಸ್ತುವಿಸ್ತಾರಹಾರಮಾಗಿರ್ದ ಹಸ್ತಿನಪುರವೆ ನಿಜವಂಶಾವಳಂಬಮಾಗೆ:ಪಂಪಭಾ, ೧. ೫೮ ವ)
ಹಾರಮಣಿಮಂಜರಿ
[ನಾ]ಹಾರದ ರತ್ನಖಚಿತವಾದ ಗೊಂಚಲು (ಮೃಗಪದಪತ್ರಲೇಖೆಗಳಂ ಏಕೆಗೆ ತಾಳ್ದಿರದಾದುವು ಈ ಕದಂಪುಗಳ್ ಉರಮೇಕೆ ಹಾರಮಣಿಮಂಜರಿಯಿಲ್ಲದೆ ಬಿನ್ನಗಿರ್ದುದು:ಪಂಪಭಾ, ೪. ೬೨)
ಹಾವ
[ನಾ]ಶೃಂಗಾರ ಚೇಷ್ಟೆ(ಪುರುಡುವೆರೆಸಿದ ಕೊಂಕಿಂಗಂ ಕಡ್ಡವಣೆವೆರಸಿದ ಸೋಂಕಿಗಂ ಗಾಡಿವೆರಸಿದ ಹಾವಕ್ಕಂ ನಾಣ್ವೆರಸಿದ ಭಾವಕ್ಕಂ:ಪಂಪಭಾ, ೪. ೧೭ ವ)
ಹಾಸ್ತಿಕ
[ನಾ]ಮಾವುತ (ಆಗಳದಱ ಸಿರಿಯರಸನಂ ಭೀಮರಥಧೊಳ್ ನುಡಿಯುತ್ತುಂ ಹಾಸ್ತಿಕಪ್ರಾಯಬಲಂ ಬರುತುಮಿರೆ:ಚಂದ್ರಪ್ರಪು,೧೦. ೪೭ ವ);[ನಾ]ಆನೆಗಳ ಹಿಂಡು (ಮಹಾಮಾಣಿಕ್ಯ ಗಾಣಿಕ್ಯ ಹಾಸ್ತಿಕ ರತ್ನೋರ್ಜಿತ ಚಕ್ರವರ್ತಿ ವಿಭವಂ:ಆದಿಪು, ೧೬. ೮)
ಹಾಸ್ತಿಕಸಾಧನ
[ನಾ]ಗಜಸೈನ್ಯ (ಧನುರ್ಧರಪ್ರಾಯರುಂ ಅಶ್ವೀಯಬಹಳಮುಂ ಹಾಸ್ತಿಕಸಾಧನಮುಮಪ್ಪ ತಮ್ಮ ಬಲಮನೊಂದು ಮಾಡಿ:ಆದಿಪು, ೧೩. ೫೬ ವ)
ಹಾಹಾರವ
[ನಾ]ಹಾಹಾಕ್ರಂದ (ಅವನೀವ್ಯೋಮಮನೆಯ್ದೆ ಪರ್ವಿ ಬಳೆದುಂ ಶೋಕಾನುಬಂಧಾಂಧಬಾಂಧವ ಹಾಹಾರವಂ ಎಂತುಮೆಯ್ದುದು ವಲಂ ಲೋಕಾಂತರಪ್ರಾಪ್ತನಪ್ಪವನಂ:ಆದಿಪು,೩. ೫೪)
ಹಿಂಗುಲಿಕ
[ನಾ]ಇಂಗಳೀಕ, ಪಾದರಸದಿಂದಾದ ಒಂದು ಅದಿರು (ಉತ್ತಪ್ತಾವದಾತಲೋಹಪುತ್ರಿಕಾನದ್ಧಲಾಕ್ಷಾಹಿಂಗುಲಿಕಪಾಟಲಫಲಂಅರ್ಧಕರವಾಳಚಾಳನಪ್ರಕಟಿತಭಟಬಿಭೀಷಿಕಾಡಂಬರಂ:ಆದಿಪು,೧೩.೪೫ವ)
ಹಿತ
[ನಾ]ಸಂತೋಷದಾಯಕನಾದವನು (ಮಂತ್ರಾಕ್ಷರ ನಿಯಮದಿಂ ಅಭಿಮಂತ್ರಿಸಿ ಬರಿಸಿದೊಡೆ ವಾಯುದೇವಂ ಬಂದು ಏಂ ಮಂತ್ರಂ ಪೇೞೆನೆ ಕುಡು ರಿಪುತಂತ್ರಕ್ಷಯಕರನಂ ಎನಗೆ ಹಿತನಂ ಸುತನಂ:ಪಂಪಭಾ,೧. ೧೨೪)
ಹಿತಮಿತ
[ಗು]ಸಂತಸದಾಯಕವಾಗಿಯೂ ಹೆಚ್ಚಲ್ಲದೆಯೂ ಇರುವ (ಮೃದುಮಧ್ಯಮತನು ಹಿತಮಿತಮೃದುವಚನಂ ಲಲಿತಮಧುರ ಸುಂದರವೇಷಂ:ಆದಿಪು,೧. ೨೯)
ಹಿಂತಾಳ
[ನಾ]ಆ ಹೆಸರಿನ ಮರ (ಫಳಕರ್ಪೂರಲವಂಗಲುಂಗಲವಳೀಹಿಂತಾಳತಾಳೀತಮಾಳಲತಾಸುಂದರನಂದನಕ್ಕಳುರೆಮುಂತನ್ನರ್ಚಿಗಳ್:ಪಂಪಭಾ,೫.೮೬)
ಹಿಂದೋಳರವ
[ನಾ]ಸಂಗೀತರವ (ಕರಿಣೀವೃಂದ ವ್ರಜೋದ್ಗಾಯನ ಸಮುದಯ ಕರ್ಣಾಮೃತಸ್ಯಂದಿ ಹಿಂದೋಳರವಂ:ಆದಿಪು, ೧೩. ೭)
ಹಿಮ
[ನಾ]ಹಿಮಾಲಯಪರ್ವತ (ಶ್ರೀದಯಿತಂ ಮನುಕುಲಗಗನಾದಿತ್ಯಂ ಹಿಮಮನೆಯ್ದೆ ಷಟ್ಖಂಡಮುಮಂ ಸಾಧಿಸಿ ಜಿತದಿಙ್ಮಂಡಲನಾದ ಮಹಾತ್ಮಂ:ಆದಿಪು, ೧೫. ೧)
ಹಿಮಕರ
[ನಾ]ಚಂದ್ರ (ಹಿಮಕರಂ ಆತ್ಮ ಶೀತರುಚಿಯಂ ದಿನನಾಯಕಂ ಉಷ್ಣದೀಧೀತಿಯಕ್ರಮಮಂ ಅಗಾಧವಾರಿಧಿಯೆ ಗುಣ್ಪಂ ಇಳಾವಧು ತನ್ನ ತಿಣ್ಪಂ ಬಿಸುೞ್ವೊಡಂ;ಪಂಪಭಾ, ೧. ೮೩)
ಹಿಮಕಿರಣ
[ನಾ]ಚಂದ್ರ (ಬಾಲಹಿಮಕಿರಣ ದಂಷ್ಟ್ರಾನನ ಜ್ಯೋತಿಯಂ ದರದಳಿತಕರಕಳಿತ ಸರಸಿರುಹನಿಳಯೆಯಂ:ಆದಿಪು, ೭. ೨೭)
ಹಿಮಕೃತ್
[ನಾ]ಚಂದ್ರ (ಹಿಮಕೃದ್ವಂಶಜರಪ್ಪ ಪಾಂಡುಸುತರಂ ಕೆಯ್ಕೊಂಡು ನಿನ್ನಯ್ದು ಬಾಡಮನಿತ್ತುಂ ನಡಪೆಂದು ಸಾಮಮನೆ ಮುಂ ಮುಂತಿಟ್ಟೊಡೆ:ಪಂಪಭಾ,೯. ೮೮)
ಹಿಮಕೃದ್ಭೂಧರ
[ನಾ][ಹಿಮಕೃತ್+ಭೂಧರ] ಹಿಮದಿಂದಾದ ಬೆಟ್ಟ, ಹಿಮಾಲಯ (ಹಿಮಕೃದ್ಭೂಧರದಂತೆ ನಿನ್ನ ಗುಣಸಂದೋಹಂಗಳಂ ಕಾಣಲಕ್ಕುಮೆ ಮತ್ತೊರ್ವನೊಳ್:ಪಂಪಭಾ, ೫. ೭೬)
ಹಿಮಗಿರಿ
[ನಾ]ಹಿಮಾಲಯ ಪರ್ವತ (ಹಿಮಗಿರಿಯ ಮಧ್ಯಕೂಟದಹಿಮವದ್ದಿವಿಜಮನೊತ್ತಿ ಕಪ್ಪಂಗೊಂಡು:ಆದಿಪು,೧೪. ೫೯)
ಹಿಮಗೌರ
[ನಾ]ಹಿಮದಂತೆ ಬೆಳ್ಳಗಿರುವ (ಏಂ ಹಿಮಗೌರಹಾರಮೆಸೆದುದೊ ಹಿಮಶೈಲಶಿಲಾವಿಶಾಲ ವಕ್ಷಸ್ಸ್ಥಳದೊಳ್:ಆದಿಪು, ೪. ೩೮)
ಹಿಮಧವಳ