Pampana Nudigani (Kannada)
Kamadhenu Pustaka Bhavana
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಹೃತ್ಕಂಪ
[ನಾ]ಎದೆನಡುಕ (ದೇವೇಂದ್ರಂ ತನಗಾದ ಹೃತ್ಕಂಪದೊಳಂ ಆಸನಕಂಪದೊಳಂ ನರೇಂದ್ರತಾಪಸಂ ತನ್ನಿಂದ್ರತ್ವಮಂ ಕೊಳಳೆಂದು ತಪಂಗೆಯ್ದಪಂ ಎಂಬ ಸಂಕೆಯೊಳ್:ಪಂಪಭಾ, ೭. ೮೦ ವ)
ಹೃತ್ಕಮಲ
[ನಾ]ಹೃದಯವೆಂಬ ಕಮಲ (ಕಮಲೋದ್ಭವನ ಅಮಳಿನ ಹೃತ್ಕಮಲದೊಳ್ ಒಗೆದರ್ ಸುರೇಂದ್ರಧಾರಕರ್ ಆ ವಾಗಮಳರ್ ನೆಗೞ್ದಿರ್ದರ್ ಪುಲಹ ಮರೀಚಿ ಅತ್ರಿ ಅಂಗಿರಸ್ ಪುಳಸ್ತ್ಯ ಕ್ರತುಗಳ್:ಪಂಪಭಾ, ೧. ೬೦)
ಹೃದಯಬಂಧ
[ನಾ]ಎದೆಯ ಗಟ್ಟಿತನ (ಅಂತು ದೃಢಕಠಿನ ಹೃದಯಬಂಧನಂ ಜರಾಸಂಧನಂ ಕೊಂದುಮಾತನ ಮಗಂ ಕ್ಷೇಮಧೂರ್ತಿಯಂ ರಾಜ್ಯದೊಳ್ ನಿಱಿಸಿ:ಪಂಪಭಾ,೬. ೨೭ ವ)
ಹೃದಯೇಶ್ವರಿ
[ನಾ]ಮನಃಪ್ರಿಯೆ(ಮತ್ತೊಂದೆಡೆಯೊಳ್ ಒರ್ವಂ ಗರ್ಭೇಶ್ವರಂ ತನ್ನ ಹೃದಯೇಶ್ವರಿಯಂ ಅಗಲ್ದು ಬಂದು ಪೆಱರಾರುಮಂ ಮೆಚ್ಚದೆ ಆಕೆಯಂ ನೆನೆದು:ಪಂಪಭಾ, ೪. ೧೦೪ ವ)
ಹೃದ್ಯವಿದ್ಯಾ[ದ್ಯೆ]
[ನಾ]ಆಕರ್ಷಣೆಯ ವಿದ್ಯೆ (ಗುಣರತ್ನವಾಧಿ ನಾನಾವಿಧಸೌಖ್ಯಭಾಜನಂ ಉಪಾರ್ಜಿತಖೇಚರರಾಜ ಹೃದ್ಯವಿದ್ಯಾವಿಭವಂ ಮಗಂ ಜಿನವಿರೋಧಿನರೇಂದ್ರಬಳಂ ಮಹಾಬಳಂ:ಆದಿಪು,೧. ೭೩)
ಹೃದ್ರೋಗ
[ನಾ] ಹೃದಯದ ಬೇನೆ, ನೋವು (ಈಗಳ್ ಅಡಂಗಿತು ಎಮ್ಮ ಹೃದ್ರೋಗಂ ಅನೇಕಮಂಗಳಪರಂಪರೆಗಳ್ ದೊರೆಕೊಂಡುವು: ಪಂಪಭಾ, ೭. ೬೦)
ಹೃಷೀಕ
[ನಾ][ಜೈನ] ಏಳು ಬಗೆಯ ನರಕಗಳಲ್ಲಿ ಒಂದು (ಕ್ರಮದೊಳಸಂಜ್ಞೆಯಂ ಸರಿಸೃಪಾವಳಿಯುಂ .. .. ಮನುಷ್ಯದುಸ್ತಿಮಿಕುಳಮುಂ ಹಿಮಾಂಶುನಯನಾಗ್ನಿ ಕಷಾಯಹೃಷೀಕ ಷಣ್ಮುನಿಕ್ರಮ ನರಕಂಗಳೊಳ್ ನೆಲಸುಗುಂ:ಆದಿಪು,೫. ೯೪)
ಹೇತಿ
[ನಾ]ಆಯುಧ (ನಾನಾ ಹೇತಿಹಸ್ತೋದ್ಭಟಭಟ ಪೃತನಾಭೀಳಮಂ ಚಿತ್ತದೊಳ್ ವೀರರಸಂ ಕೈಗಣ್ಮಿ ಪೊಣ್ಮುತ್ತಿರೆ ನಿಜಬಲಮಂ ನೋಡಿದಂ ಸಾರ್ವಭೌಮಂ:ಆದಿಪು, ೧೧. ೨೪)
ಹೇತಿಮುಕ್ತ
[ಗು]ಆಯುಧವನ್ನ ತೊರೆದ (ಕರಿಸಂಘಾತಮುಮಂ ಹಯವ್ರಜಮುಮಂ ಪಿಂತಿಕ್ಕಿ ತೂರ್ಯಸ್ವನೋತ್ಕರಮಂ ಮಾಣಿಸಿ ಹೇತಿಮುಕ್ತ ಭಟದೋರ್ದಂಡಾಗ್ರಶುಂಭದ್ಧ್ವಜೋತ್ಕರ ಸಂದೋಹಮಂ ಬಿಸುಟ್ಟು:ಆದಿಪು, ೧೨. ೬೮)
ಹೇತಿಹಸ್ತ
[ನಾ]ಆಯುಧ ಹಿಡಿದ ಕೈ (ನಾನಾ ಹೇತಿಹಸ್ತೋದ್ಭಟಭಟ ಪೃತನಾಭೀಳಮಂ ಚಿತ್ತದೊಳ್ ವೀರರಸಂ ಕೈಗಣ್ಮಿ ಪೊಣ್ಮುತ್ತಿರೆ ನಿಜಬಲಮಂ ನೋಡಿದಂ ಸಾರ್ವಭೌಮಂ:ಆದಿಪು, ೧೧. ೨೪)
ಹೇತು
[ನಾ]ಕಾರಣ (ಆಚಂದ್ರಾರ್ಕಪ್ರತೀತ ಉಭಯಗಿರಿ ಶಿಖರಾತ್ ಸ್ವೋದಯಸ್ಮೈಕಹೇತೋಃ:ಪಂಪಭಾ, ೧೪. ೨೭)
ಹೇತುತ್ವ
[ನಾ]ಕಾರಣದಿಂದ ಕೂಡಿರುವುದು (ಅದು ಶರೀರಬಳಾಯುರ್ದೇಹಪ್ರಮಾಣ ಉಪಚಯ ಅಪಚಯ ಹೇತುತ್ವದಿಂದಂ ಉತ್ಸರ್ಪಿಣಿ ಅವಸರ್ಪಿಣಿನಾಮಮಂ ಪಡೆದುದು:ಆದಿಪು, ೬. ೪೮ ವ)
ಹೇಮನಳಿನಿ
[ನಾ]ಹೊಂದಾವರೆ (ಭ್ರಮರೀಗೀತಸಮೇತ ಹೇಮನಳಿನೀಶ್ರೀಸಂಗೆಯಂ ನೋಡಿ:ಆದಿಪು, ೧೧. ೫೬)
ಹೇಮಪಂಕಜ
[ನಾ]ಹೊಂದಾವರೆ(ಪುಷ್ಪಿತ ಹೇಮಪಂಕಜ ರಜಸ್ಸಂಸಕ್ತಭೃಂಗಾಂಗನಾನಿಕರಂ ಸಾರಸ ಹಂಸ ಕೋಕಿಳಕುಳ ಧ್ವಾನೋತ್ಕರಂ ಚೆಲ್ವನಾಯ್ತು:ಪಂಪಭಾ, ೫. ೮೦)
ಹೇಮಪಟ್ಟಕ
[ನಾ] ಚಿನ್ನದ ಗದ್ದುಗೆ (ವಿಶಾಲ ಹೇಮಪಟ್ಟಕದೊಳ್ ಆತ್ಮಹೃತ್ಪದ್ಮೆಯಂ ಸರಸ್ವತಿಯಂ ಪೂಜಾಪೂರ್ವಕಂ ಅಧಿವಾಸಿಸಿ: ಆದಿಪು, ೮. ೫೮ ವ)
ಹೇಮರಶನ
[ನಾ]ಚಿನ್ನದ ಉಡಿದಾರ (ಪೋಲ್ಕುಂ ಆ ಪುರಾಗನೆಯ ಪೊದಳ್ದ ಹೇಮರಶನಾತ್ರಯಮಂ ಪರಿಖಾತಾತ್ರಯಾಂತರಂ:ಆದಿಪು, ೬. ೧೦೨)
ಹೇಮರಶನಾಧ್ವನಿ
[ನಾ]ಚಿನ್ನದ ಒಡ್ಯಾಣದ ಸದ್ದು (ಈ ಜಗನಮಿದೇಕೆ ಹೇಮರಶನಾಧ್ವನಿಯಿಲ್ಲದೆ ಮೂಗುವಟ್ಟುದು ಈ ಬಗೆಯೋಲ್ ಅಲಕ್ತಕದ್ರವದೊಳೊಂದದೆ ನಿಂದುವು ಪಾದಪಂಕಜಂ:ಪಂಪಭಾ, ೪. ೬೨)
ಹೇಮರೇಣು
[ನಾ]ಚಿನ್ನದ ದೂಳು(ತತ್ ಗಿರೀಂದ್ರ ಕಂದರ ಕನಕಾಚಳಂಗಳಂ ಇಂತುಟನಿತಂ ತವೆ ಹೇಮರೇಣುಗಳ್ವೆರಸು ಕಡಂಗಿ ಪೊತ್ತು ನಡೆದತ್ತು ಘಟೋತ್ಕಚರೌದ್ರಸಾಧನಂ:ಪಂಪಭಾ, ೬. ೩೨)
ಹೇಮಲತಿಕಾಕುಂಜ
[ನಾ] ಹೊಂಬಣ್ಣದ ಬಳ್ಳಿಗಳ ಪೊದರು (ಪದ್ಮಾಕರಾಳಿಯೊಳ್ ತಣ್ಪುಗಳುಂಟು ಹೇಮಲತಿಕಾ ಕುಂಜಂಗಳೊಳ್ ನಮ್ಮ ನನ್ನಿಗೆ ಬನ್ನಂ ಬರಲೀಯದು: ಪಂಪಭಾ, ೭. ೩೦)
ಹೇಮಾಚಳೇಂದ್ರ