Pampana Nudigani (Kannada)
Kamadhenu Pustaka Bhavana
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಹೇಮಾದ್ರಿ
[ನಾ]ಚಿನ್ನದ ಬೆಟ್ಟ, ಮೇರುಪರ್ವತ (ಅಮರಮನೋಹಾರಿ ಹೇಮಾದ್ರಿಯಂ ವ್ಯೋಮಗಕಲ್ಲೋಲಾಬ್ದಿಯಂ:ಆದಿಪು, ೮. ೨೬)
ಹೇಮಾಸನ
[ನಾ]ಚಿನ್ನದ ಪೀಠ (ಮಣಿಮಯಾಸನಪ್ರಾಚ್ಯಾಚಳ ಶಿಖಂಡರತ್ನಮಾಗಿರ್ದ ಕುಮಾರನಂ ಸಾರೆವಂದು ಯಥೋಚಿತ ಹೇಮಾಸನದೊಳ್ ಕುಳ್ಳಿರ್ದು:ಆದಿಪು, ೮. ೮ ವ)
ಹೇಯ
[ನಾ][ಜೈನ] ತತ್ತ್ವದ ಎರಡು ಬಗೆಗಳಲ್ಲಿ ಒಂದು, ಸಂಸಾರಕಾರಣವಾದುದು (ನಿನ್ನಬೆಸಗೊಂಡತತ್ತ್ವಮುಂಹೇಯೋಪಾದೇಯರೂಪದಿಂದ್ವಿವಿಧಮಕ್ಕುಂಸಂಸಾರಕಾರಣಂಗಳ್ಹೇಯಂಗಳ್:ಆದಿಪು,೧೦.೬೩ವ)
ಹೇಲ
[ನಾ]ಆಟ, ಆಟದಂತೆ ಸುಲಭ (ಹೇಲೋಲ್ಲಂಘಿತ ಮಹಾವಾಹಿನೀಭೂರಿಭೈರವಾಜಿಗಳಪ್ಪ ವಾಜಿಗಳಿಂದಂ:ಆದಿಪು, ೧೪. ೪೩ ವ)
ಹೇಷಿತ
[ನಾ]ಕುದುರೆಯ ಕೆನೆತ (ಮದಗಜ ಬೃಂಹಿತಧ್ವನಿ ತುರಂಗಮ ಹೇಷಿತ ಘೋಷಂ ಆದಂ ಒರ್ಮೊದಲೆ ಪಯೋಧಿಮಂಥನ ಮಹಾರವಮಂ ಗೆಲೆ:ಪಂಪಭಾ, ೩. ೩೮)
ಹೇಷಿತಂಗೆಯ್
[ಕ್ರಿ] ಕೆನೆ, ಶಬ್ದ ಮಾಡು (ದಕ್ಷಿಣಚರಣದೊಳ್ ನೆಲನಂ ಪರಡಿ ಗಂಭೀರನಿನಾದದಿಂ ಹೇಷಿತಂಗೆಯ್ವ ವಿಜಯಹಯಮುಮಂ: ಪಂಪಭಾ, ೯. ೯೫ ವ)
ಹೇಳಾಸಾಧ್ಯ
[ನಾ][ಹೇಲಾ+ಸಾಧ್ಯ] ಆಟದಷ್ಟು ಸುಲಭವಾಗಿ ಗೆಲ್ಲಬಲ್ಲದ್ದು (ವಿರಾಟನ ಮಂಡಲಂ ಗೋಮಂಡಲದಂತೆ ಹೇಳಾಸಾಧ್ಯಮಾಗಿ ಕೈಗೆ ವರ್ಕುಂ:ಪಂಪಭಾ, ೮. ೮೩ ವ)
ಹೈಡಿಂಬ
[ನಾ]ಹಿಡಿಂಬನ ಮಗ, ಘಟೋತ್ಕಚ (ಇನ್ನುಮೊಳಂ ರಾವಣಂ ಎಂಬಿನಂ ನೆಗೞ್ದುದಾ ಹೈಡಿಂಬನಾಡಂಬರಂ:ಪಂಪಭಾ, ೧೨. ೧೦)
ಹೈಮಕ್ಷ್ಮಾಚಳೇಂದ್ರ
[ನಾ]ಹಿಮಾಲಯಪರ್ವತ (ಹೈಮಕ್ಷ್ಮಾಚಳೇಂದ್ರಂಬರೆಗಂ ಅಖಿಳಷಟ್ಖಂಡ ಭೂಭಾಗಮಂ .. .. ದಿಗ್ವಿಜಯದೊಳಗೆದು ಆನಂದಭೇರೀರವಂ ಘೂರ್ಣಿಸೆ:ಆದಿಪು,೧೪. ೧೪೮)
ಹೈಮಾಚಳ
[ನಾ]ಹಿಮವತ್ಪರ್ವತ (ಮದಿರೋನ್ಮತ್ತ ನಿಳಿಂಪ ಕಿಂಪುರುಷಕಾಂತಾರಬ್ಧಸಂಗೀತಂ ಒಪ್ಪಿದುದಲ್ತೆ ಸುರಸಿದ್ಧ ದಂಪತಿರತಿಶ್ರೀರಮ್ಯಹೈಮಾಚಳಂ:ಪಂಪಭಾ, ೭. ೭೨)
ಹೈಯಂಗವೀನ
[ನಾ]ಹಸುವಿನ ಬೆಣ್ಣೆಯಿಂದ ಆಗ ತಾನೆ ಕಾಯಿಸಿದ ತುಪ್ಪ (ಅತಿದೂರೋಚ್ಛ್ವಾಸವಿಕಾಸ ನಾಸಾಂಜಲಿಪುಟ ಪೀಯಮಾನ ದುಗ್ಧ ಹೈಯಂಗವೀನಮುಮಂ:ಆದಿಪು, ೧೧. ೨೬ ವ)
ಹೋತೃ
[ನಾ]ಹೋತಾರ, ಋಗ್ವೇದವನ್ನು ಹೇಳುವವನು (ಅಗ್ನೀಧ್ರ ಮೈತ್ರಾವರುಣ ಅಗ್ನಿಪರಿಚಾರಕ ಉದ್ಗಾತೃ ನೇತೃ ಹೋತೃ ಜಮದಗ್ನಿ ಆದಿಗಳಪ್ಪ ಷೋಡಶರ್ ಋತ್ವಿಜರ್ಕಳಿಂ:ಪಂಪಭಾ, ೬. ೩೩ ವ)
ಹೋಮಕುಂಡ
[ನಾ]ಯಜ್ಞದ ಬೆಂಕಿಯಿರುವ ಗುಂಡಿ (ಹೋಮಕುಂಡದಲ್ಲಿ ಧಗಧಗಿಸುವ ಜ್ವಾಲಾಮಾಲೆಗಳೊಳ್ .. .. ದೃಷ್ಟದ್ಯುಮ್ನನೆಂಬ ಮಗನುಮಂ .. .. ಪಡೆದಂ:ಪಂಪಭಾ, ೩. ೩೨ ವ)
ಹೋಮಭೂಮಿ
[ನಾ]ಯಜ್ಞಭೂಮಿ (ಮನಂ ಆರಾಧಿತ ಹೋಮಭೂಮಿ ಪಶುಗಳ್ ಕಾಮಾತುರರ್ ಬಂದ ಮಾವನಿತುಂ ಸ್ಥಾಪಿತಯೂಪಕೋಟಿ:ಪಂಪಭಾ, ೪. ೫೯)
ಹೋಮಾಗ್ನಿ
[ನಾ]ಯಜ್ಞದ ಬೆಂಕಿ (ಹೋಮಾಗ್ನಿಯಂ ಎಱಂಕೆಯ ಗಾಳಿಯಿಂ ನಂದಲೀಯದುರಿಪುವ ರಾಜಹಂಸೆಗಳುಮಂ ಮುನಿಗಣೇಶ್ವರರೊಡನೆ ದಾಳಿವೂಗೊಯ್ವೊಡನೆ ವರ್ಪ ಗೋಳಾಂಗೂಳಂಗಳುಮಂ:ಪಂಪಭಾ,೧. ೧೧೫ ವ); (º
ಹೋಮಾನಲ
[ನಾ] ಹೋಮದ ಬೆಂಕಿ (ನಿಟ್ಟಿಸೆ ಹೋಮಾನಲನೊಳ್ ಪುಟ್ಟಿದ ನಿನಗಕ್ಕ ಪರಕೆಯಾವುದೊ: ಪಂಪಭಾ, ೩. ೪೮)
ಹೋಯಜಬಾಪ್
[ಅ]ಹೋ ಅಜ ಬಾಪ್, ಆಶ್ಚರ್ಯಮೆಚ್ಚಿಕೆಗಳ ಉದ್ಗಾರಗಳು ಮೊಸಳೆ (ಛಾಯಾಲಕ್ಷ್ಯಮನೊಡ್ಡಿಯುಂ ಆಯದ ನೀರೊಳಗೆ ತನ್ನನಡಸಿದ ನೆಗೞಂ ಬಾಯೞಿವಿನಂ ಇಸಿಸಿಯುಂ ಅರೆ ಹೋಯಜ ಬಾಪ್ಪೆಂದು ಹರಿಗನಂ ಗುರು ಪೊಗೞೆಪಂಪಭಾ, ೨. ೬೦)
ಹ್ರಸ್ವ
[ಗು]ಕಿರಿದಾದ, ನೀಳವಲ್ಲದ (ಅನುಪೂರ್ವ ಧನುರಾಕರವಂಶನುಂ ಋಜುಪರಿಪೂರ್ಣಹ್ರಸ್ವಗ್ರೀವನುಂ ಮಹಾವ್ಯೂಢೋರಸ್ಕನುಂ:ಆದಿಪು, ೧೨. ೫೬ ವ)
ಹ್ರೀ