Pampana Nudigani (Kannada)
Kamadhenu Pustaka Bhavana
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಹಟತ್
[ಗು]ಹೊಳೆಯುವ (ಘಟಾಘಟಿತ ಹಟತ್ ವಿರೋಧಿರುಧಿರಪ್ಲವಲಂಪಟ ಸಂಕಟೋತ್ಕಟಂ:ಪಂಪಭಾ, ೧೧. ೧೪೬)
ಹಟತ್ಕಿರೀಟ
[ನಾ]ಹೊಳೆಯುವ ಕಿರೀಟ (ಕಟಕ ಕಟಿಸೂತ್ರ ಕುಂಡಲ ಹಟತ್ಕಿರೀಟ ಅಂಗದಾದಿ ಮಣಿಭೂಷಣ ಭಾಜಟಿಳಿತ ಮೂರ್ತ್ಯುತ್ಕರ್ಷಂ ಸ್ಫುಟಹರ್ಷಂ ತನ್ನ ವರ್ಷವರ್ಧನ ದಿನದೊಳ್:ಆದಿಪು, ೨. ೨)
ಹತಪ್ರತಿಜ್ಞ
[ನಾ]ಪ್ರತಿಜ್ಞಾಭಂಗರಾದವರು (ಆತ್ಮೀಯವಿದ್ಯಾ ಗರ್ವಪರ್ವತಂ ಅವರ ವಚೋನಿರ್ಘಾತದಿಂ ನುಚ್ಚುನುಱಿಯಾಗಿ ಪೋದೊಡೆ ಹತಪ್ರತಿಜ್ಞರುಂ ಗಳಿತಗರ್ವರುಂ ಆಗಿ:ಆದಿಪು, ೩. ೭೫ ವ)
ಹತವಿಹತ
[ನಾ]ಹೊಡೆತ ಮರುಹೊಡೆತ(ವಿದ್ವಿಷ್ಟವಿದ್ರಾವಣನ ಮೊನೆಯಂಬಿನ ಏಱಿಂಗೆ ಅಳ್ಕಿ ಹತವಿಹತ ಕೋಳಾಹಳರಾಗಿ:ಪಂಪಭಾ, ೫. ೮೮ ವ)
ಹತಿ
[ನಾ]ಹೊಡೆತ (ವಿನತಾಪುತ್ರನ ವಜ್ರ ತುಂಡ ಹತಿಗಂ ಮೆಯ್ಯಾಂತು ಕಂಡಂಗಳುಳ್ಳಿನಂ ಅಂಗಂಗಳಂ ಒಡ್ಡಿ ಒಡ್ಡಿ ತನುವಂ ಕೊಟ್ಟಂತು:ಪಂಪಭಾ, ೪. ೨೬);[ನಾ]ವಧೆ, ಹತ್ಯೆ (ಕರ್ಣಹತಿಯೊಳ್ ತನಗೞ್ಕಱನೀಯೆ ಬಂದನಂದು ಅರಮನೆಗೆ ಅಚ್ಯುತಂಬೆರಸು ಅಳುರ್ಕೆಯಿಂ ಅಮ್ಮನ ಗಂಧವಾರಣಂ:ಪಂಪಭಾ, ೧೨. ೨೨೧)
ಹತೋಶ್ವತ್ಥಾಮಾ
[ಹತಃ+ಅಶ್ವತ್ಥಾಮಾ] ಅಶ್ವತ್ಥಾಮ ಹತನಾ[ದನು/ಯಿತು] (ಸಾಮಜಮಶ್ವತ್ಥಾಮಂ ನಾಮದಿಂದ ಒಂದೞಿದೊಡೆ ಅಲ್ಲಿ ಕಂಡು ಹತೋಶ್ವತ್ಥಾಮಾ ಎನೆ: ಪಂಪಭಾ, ೧೨. ೨೭)
ಹಯ
[ನಾ]ಕುದುರೆ[ಸೈನ್ಯ](ಸರಳ ಪೊದಳ್ದ ಬಲ್ಸರಿಯ ಕೋಳ್ಗಿರಲಾಱದೆ ತೆರಳ್ದು ದುರ್ಧರ ಹಯಂ ಅೞ್ಗಿ ಸಂದಣಿಸಿ ಸಂದಣಿ ಕೋಳ್ಗುದಿಗೊಂಡು:ಪಂಪಭಾಪರಿಷತ್ತು, ೩. ೭೦)
ಹಯವಲ್ಲನ
[ನಾ]ಕುದುರೆಯ ಒಂದು ಬಗೆಯ ನಡಿಗೆ (ಅದಂ ಗುಣಾರ್ಣವನಿಡಲೊಲ್ದನಿಲ್ಲ ಹಯವಲ್ಲನ ಸಚಳರತ್ನಕುಂಡಳಂ:ಪಂಪಭಾ,೫. ೫೧)
ಹಯಹೇಷಿತ
[ನಾ]ಕುದುರೆಯ ಕೆನೆತ (ಮದಸ್ತಂಭೇರಮ ಬೃಂಹಿತಂಗಳಿಂದಂ ಯುಗಪದಾಸ್ಫಾಲಿತ ಅನೇಕ ದುಂದುಭಿಧ್ವನಿ ಮಧುರಗೀತಂಗಳಪ್ಪ ಹಯಹೇಷಿತಂಗಳಿಂದಂ:ಆದಿಪು, ೧೪. ೯೬ ವ)
ಹಯೋಪಾಯ
[ನಾ]ಅಶ್ವವಿದ್ಯೆ (ಹಯೋಪಾಯಕುಶಲರಪ್ಪ ಗಾಂಗೇಯರ್ ಅಱಿಪಿದ ಮಾತಂ ಏಕಾಂತದೊಳ್ ಅಱಿಪುವುದುಂ:ಪಂಪಭಾ, ೧೨. ೮೮ ವ)
ಹಯೌಘ
[ನಾ]ಕುದುರೆ ಸೈನ್ಯ (ಮನಮುಳ್ಳುನ್ಮದ ಗಂಧಸಿಂಧುರಚಯಂ ಚಂಡಾಜಿವಿಕ್ರಾಂತಮರ್ತ್ಯನಿಳಾಕ್ರಾಂತ ಹಯೌಘಂ:ಆದಿಪು, ೪. ೯೧)
ಹರ
[ನಾ]ತೀರ್ಥಂಕರ (ತಮೋಹರನಾಗಿರ್ದುದಱಿಂ ಹರಂ ಭವಹರಂ ಮಾಣಿಕ್ಯದೇವಂ ವಸುಂಧರೆಗೊರ್ಬನೆ ದೇವನಾಗಿರೆ:ಆದಿಪು, ೧೬. ೬);[ನಾ]ಶಿವ (ಕಿಡುಗುಮೆರಾಜ್ಯಂರಾಜ್ಯದತೊಡರ್ಪದೇವಾೞ್ತೆನನ್ನಿಯನುಡಿಯಂಕಿಡೆನೆಗೞೆನಾನುಮೆರಡಂನುಡಿದೊಡೆಹರಿಹರಹಿರಣ್ಯಗರ್ಭರ್ನಗರೇ:ಪಂಪಭಾ,೧.೮೨)
ಹರಗಳ
[ನಾ]ಶಿವನ ಕೊರಳು(ಪಿರಿದುಂ ಬನ್ನದ ಕರ್ಪೆಸೆದುದು ತೊಱೆಗಿನ್ನುಂ ಹರಗಳ ತಮಾಳನೀಳಚ್ಛವಿಯಿಂ:ಪಂಪಭಾ, ೫. ೫೪)
ಹರಣ
[ನಾ] [ಬಾಣ] ಬಿಡುವುದು (ಶರಸಂಧಾನ ಆಕರ್ಷಣ ಹರಣಾದಿ ವಿಶೇಷವಿವಿಧಸಂಕಲ್ಪಕಳಾಪರಿಣತಿಯಂ ಮೆಱೆದುದು: ಪಂಪಭಾ, ೧೨. ೧೮೬)
ಹರಣಂಗೆಯ್
[ಕ್ರಿ]ಕೊಲ್ಲು (ಪಾಱುವ ಪಾಱುಂಬಳೆ ಕೊಳೆ ಜೀಱೆೞ್ದಂಬರಕೆ ತಲೆ ಸಿಡಿಲ್ದೊಡಂ ಆ ಕಾಯ್ಪಾಱದೆ ಹರಣಂಗೆಯ್ದುವು ಜಾಱಲ್ಲದೆ ಜೋದರ ಅಟ್ಟೆಗಳ್ ಕೆಲವಾಗಳ್:ಪಂಪಭಾ, ೧೦. ೯೫)
ಹರಬರ್ಪನ್ನಂ
ಶಿವನು ಪ್ರತ್ಯಕ್ಷನಾಗುವವರೆಗೂ (ಸಂಕರನ ನೀನಾರಾಧಿಸು ಎಂದು ಇಂತಿದಂ ಮುನಿಪರಾಶರಂ ಒಲ್ದು ಪೇೞೆ ಹರಬರ್ಪನ್ನಂ ತಪಂಗೆಯ್ದಪೆಂ:ಪಂಪಭಾ.೮. ೫)
ಹರವೃಷಭ
[ನಾ]ಶಿವನ [ವಾಹನವಾದ] ಎತ್ತು (ದೇವೇಂದ್ರನಟ್ಟಿದ ಕಲ್ಪವೃಕ್ಷದ ತಳಿರ್ಗಳಂ ಐರಾವತದ ಹರವೃಷಭದ ಕೋಡ ಮಣ್ಣುಮಂ ಆಕಾಶಗಂಗೆಯ ನೀರುಮಂ:ಪಂಪಭಾ, ೧೪. ೧೭ ವ)
ಹರಿ
[ನಾ]ಕುದುರೆ (ಸಾರಥಿ ರಥಮಂ ಲೀಲೆಯೆ ಚೋದಿಸೆ ತೆರೆಗಳ ಮಾಲೆಯನವಯವದೆ ದಾಂಟಿ ಪರಿದುವು ಹರಿಗಳ್:ಆದಿಪು, ೧೨. ೮೧);[ನಾ]ವಿಷ್ಣು (ಕಿಡುಗುಮೆರಾಜ್ಯಂರಾಜ್ಯದತೊಡರ್ಪದೇವಾೞ್ತೆನನ್ನಿಯನುಡಿಯಂಕಿಡೆನೆಗೞೆನಾನುಮೆರಡಂನುಡಿದೊಡೆಹರಿಹರಹಿರಣ್ಯಗರ್ಭರ್ನಗರೇ:ಪಂಪಭಾ,೧.೮೨);[ನಾ]ಸಿಂಹ (ಉದಯಗಿರಿ ಕಟಕ ಕುಹರ ಪರಿಕರ ನಿಶಾಕರಂ ಹರಿದಳಿತ ನಿಜಹರಿಣ ರುಧಿರನಿಚಯ ನಿಚಿತಮಾದಂತೆ ಲೋಹಿತಾಂಗನಾಗೆ:ಪಂಪಭಾ, ೪. ೪೯ ವ);[ನಾ]ಕೃಷ್ಣ (ಪುಸಿಯೆನೆ ರಥಮಂ ಹರಿ ಚೋದಿಸುವಂತೆವೊಲಿರ್ದು ಅದೆಂತು ನರನಂ ಗೆಲಿಪಂ ವಿಸಸನದೊಳ್:ಪಂಪಭಾ, ೧೨. ೯೧);[ನಾ]ಇಂದ್ರ(ಕಸವರಗಲಿತನದ ಪೊದಳ್ದ ಪರಮಕೋಟಿಗೆ ಪೆಱರಾರ್ ಸಲೆ ಕರ್ಣನಲ್ಲದೆ ಎನಿಸುವ ಕಲಿತನಮಂ ಹರಿಗೆ ಕವಚಮಿತ್ತುದೆ ಪೇೞ್ಗುಂ:ಪಂಪಭಾ, ೧೨. ೯೯)
ಹರಿಕಾ
[ನಾ] ಅಲೆ (ಭಯಂಕರಶಿಂಶುಮಾರ ವಿಕಟದಂಷ್ಟ್ರಾ ಕ್ರಕಚಪಾಟ್ಯಮಾನ ನಾರಕನಿಕರ ರುಧಿರಚ್ಛಟ ಅಚ್ಛಾರುಣಿಸಲಿಲ ಹರಿಕಾನಿಕರಕರಾಳೆಯುಂ: ಆದಿಪು, ೫. ೮೭ ವ)
ಹರಿಕೇತು